
ಸಂಜೆವಾಣಿ ವಾರ್ತೆ
ಹಿರಿಯೂರು.ನ.6- ಉನ್ನತ ಶಿಕ್ಷಣವು ದೇಶದ ಸಂಪತ್ತು ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆದಲ್ಲಿ ದೇಶವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಯಶಸ್ವಿಯಾಗಿ ಪ್ರಗತಿ ಪಥದತ್ತ ಮುನ್ನಡೆಯಬಲ್ಲದು ಎಂದು ಸಹಾಯ ರೂರಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ವೆಲ್ಫೇರ್ ಸೊಸೈಟಿ ಯ ಅಧ್ಯಕ್ಷರಾದ ಜಿ ದಾದಾಪೀರ್ ಹೇಳಿದರು. ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರ ವಿಭಾಗದಲ್ಲಿ ಪಿ.ಹೆಚ್. ಡಿ ಪದವಿ ಪಡೆದ ಹಿರಿಯೂರಿನ ಚಿನ್ನದ ಹುಡುಗಿ ಎಂದು ಹೆಸರಾಗಿರುವ ಡಾ.ಎಂ ಆರ್ ಅಮೃತ ಲಕ್ಷ್ಮಿ ಯವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಮಾರುತಿ ರಾವ್ ಜಾದವ್ ರವರು ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಪೋಷಕರು ಮಕ್ಕಳಿಗೆ ಮಾಡುವ ಆಸ್ತಿ ಎಂದು ತಿಳಿಸಿ ಹಿರಿಯೂರಿನ ಡಾ.ಎಂ.ಆರ್.ಅಮೃತ ಲಕ್ಷ್ಮಿ ಯವರು ಬಹುಮುಖ ಪ್ರತಿಭೆಯಾಗಿದ್ದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಖಲೀಲ್ ಅಹ್ಮದ್, ಸಲೀಂ, ಎಂ ರವೀಂದ್ರನಾಥ್, ಶ್ರೀಮತಿ ಎನ್. ರೇಖಾ, ಕಿರಣ್ ಮಿರಜ್ಕರ್ ,ಪ್ರಕಾಶ್ ಮಿರಜ್ಕರ್, ಮತ್ತಿತರರು ಉಪಸ್ಥಿತರಿದ್ದರು