ಉನ್ನತ ವ್ಯಾಸಂಗದ ಮೂಲಕ ಸಾಧನೆ ಮಾಡಬೇಕು; ಬಸವಪ್ರಭು ಶ್ರೀ

ಚಿತ್ರದುರ್ಗ, ಜೂ. 19 – ನಗರದ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ  2022-23ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್., ಎನ್.ಸಿ.ಸಿ., ಮಹಿಳಾ ಸಬಲೀಕರಣ ಹಾಗೂ ವಿವಿಧ ಕೋಶಗಳ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ದಿವ್ಯಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಹೆತ್ತ ತಂದೆ-ತಾಯಿಗೆ, ಗುರುಗಳಿಗೆ ಅತ್ಯಂತ ಗೌರವ ಪ್ರೀತ್ಯಾದರಗಳಿಂದ ಕಾಣಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಿ ಉನ್ನತ ವ್ಯಾಸಂಗದ ಮೂಲಕ ಸಾಧನೆ ಮಾಡಬೇಕೆಂದು ಜೀವನದ ಪಾಠ ಹೇಳಿದರು.ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಲೆಕ್ಕಪತ್ರ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಡಾ. ಜೆ.ವಿ. ನಂದನ್‌ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಓದಿನ ಮಹತ್ವ ಮತ್ತು ಜೀವನದ ಮಹತ್ವದ ಕುರಿತು ವಿವರಿಸುತ್ತ, ಈ ಕಾಲೇಜಿನಲ್ಲಿ ಓದಿದ ದಿನಗಳನ್ನು ನೆನಪು ಮಾಡಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಸಿ. ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಹೊಂದಿದ ಗುರಿಯನ್ನು ಮುಟ್ಟಲು ಗುರುವಿನ ಅವಶ್ಯಕತೆ ಇದೆ. ಅಂಥ ಗುರುವಿನ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಜವಾಬ್ದಾರಿಯುತ ಗಣ್ಯವ್ಯಕ್ತಿಯಾಗಿ ರೂಪುಗೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಅತಿಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ಸಿದ್ದು-ಕಲಾ ವಿಭಾಗ, ಆಯಿಶಾ ಸುಲ್ತಾನ-ವಿಜ್ಞಾನ ವಿಭಾಗ, ಶ್ರೀರಕ್ಷಾ – ವಾಣಿಜ್ಯವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪಿಹೆಚ್.ಡಿ. ಪದವಿ ಪುರಸ್ಕೃತರಾದ ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹರ್ಷವರ್ಧನ ಎ. ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿವಿಧ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.ಉಪಪ್ರಾಚಾರ್ಯ ಪ್ರೊ. ಹೆಚ್.ಕೆ. ಶಿವಪ್ಪ, ಡಾ. ಹರ್ಷವರ್ಧನ್, ಐಕ್ಯೂಎಸಿ ಸಂಯೋಜಕರು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕು| ಕಾವ್ಯ ಎಂ. ಸ್ವಾಗತಿಸಿದರು. ಕು| ಸೋನಿಕಾ ವಂದಿಸಿದರು. ಕು| ಲತಾ ನಿರೂಪಿಸಿದರು.