ಉನ್ನತ ನಾಯಕ ಶ್ರೀರಾಮುಲಿಗೆ ಸೋಲಿಸಿದ  ನಾಗೇಂದ್ರಗೆ ಸಚಿವ ಸ್ಥಾನದ ಭಾಗ್ಯ


ಎನ್.ವೀರಭದ್ರಗೌಡ
ಬಳ್ಳಾರಿ, ಮೇ.14:  ರಾಜ್ಯ ಬಿಜೆಪಿಯ ಉನ್ನತ ನಾಯಕರಲ್ಲಿ ಒಬ್ಬರಾಗಿದ್ದ ಸಚಿವ ಬಿ.ಶ್ರೀರಾಮುಲು ಅವರನ್ನು ಭರ್ಜರಿ ಮತಗಳ ಅಂತರದಿಂದ ಸೋಲಿಸಿರುವ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ  ಅವರಿಗೆ ಸಚಿವ ಸ್ಥಾನ ಬಹುತೇಖ ಖಚಿತ.
ಜಿಲ್ಲೆಯ ಐದು ಕದಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದರೂ ನಾಗೇಂದ್ರ ಅವರು ಎದುರಿಸಿದ್ದ ದೊಡ್ಡ ನಾಯಕ ಶ್ರೀರಾಮುಲು ಅವರನ್ನು. ನಗರ ಕ್ಷೇತ್ರದ ಶಾಸಕ ಭರತ್ ರೆಡ್ಡಿ ಮದಲ ಬಾರಿಗೆ, ಗಣೇಶ್ ಮತ್ತು  ಬಿ.ಎಂ.ನಾಗಾರಾಜ್ ಎರಡನೇ ಬಾರಿಗೆ ಶಾಸಕರಾಗಿದ್ದಾರೆ.
ನಾಗೇಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಜಿಲ್ಲೆಯಿಂದ ಪೈಪೋಟಿ ನೀಡಬೇಕಾಗಿರುವವರು. ಸಂಡೂರಿನಿಂದ ನಾಲ್ಕನೇ ಬಾರಿಗೆ ಶಾಸಕರಾಗಿರುವ ಈ.ತುಕರಾಂ ಅವರು. ಈಗಾಗಲೇ ಒಮ್ಮೆ ಅವರು ಸಚಿವರಾಗಿದ್ದಾರೆ. ಅವರು ಸೇಫ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅಲ್ಲದೆ ಅವರ ರಾಜಕೀಯ ಗುರು ಸಂತೋಷ್ ಲಾಡ್ ಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಹಾಗಾಗಿ ನಾಗೇಂದ್ರ ಅವರಿಗೆ ಸಚಿವ ಸ್ಥಾನದ ಭಾಗ್ಯ ದೊರೆಯುವ ಸಾಧ್ಯತೆ ಹೆಚ್ಚಿದೆ.
ಅಷ್ಟೇ ಅಲ್ಲದೆ ಅಖಂಡ ಜಿಲ್ಲೆಯಲ್ಲೂ ವಿಜಯನಗರದಿಂ ಗವಿಯಪ್ಪ ಎರಡನೇ ಬಾರಿಗೆ, ಕೂಡ್ಲಿಗಿಯ ಡಾ.ಶ್ರೀನಿವಾಸ್ ಮೊದಲ ಬಾರಿಗೆ ಆಯ್ಕೆಯಾಗುವುದರಿಂದ ಆ ಜಿಲ್ಲೆಯಿಂದಲೂ ಸಚಿವ ಸ್ಥಾನದ ಆಕಾಂಕ್ಷೆಯ ಒತ್ತಡ ಕಡಿಮೆ. ಅಖಂಡ ಜಿಲ್ಲೆಯಿಂದಲೇ ನಾಗೇಂದ್ರಗೆ ಸಚಿವ ಸ್ಥಾನದ ಲಕ್ ದೊರೆಯಲಿದೆ ಎಂಬ ಮಾಹಿತಿ ಇದೆ.
ಸಂಜೆವಾಣಿ  ಜೊತೆ ಮಾತನಾಡಿದ ಶಾಸಕ ಬಿ.ನಾಗೇಂದ್ರ. ನಮ್ಮ ಕ್ಷೇತ್ರ ಹೈವೋಲ್ಟ್ ಆಗಿತ್ತು. ನಾವು  ಕಾಂಗ್ರೆಸ್ ಶಕ್ತಿ‌  ಏನೆಂಬುದನ್ನು ತೋರಿಸಿದ್ದೇವೆ,
ಹಣ ಬಲದ ಮೇಲೆ ಬಿಜೆಪಿ ನಾಯಕರು ಬಂದಿದ್ದರು.  ಆದರೆ ಮತದಾರರು ಅವರಿಗೆ ತಕ್ಕ ಬುದ್ದಿ ಕಲಿಸಿದ್ದಾರೆ.‌ ಕೇವಲ ಹಣದಿಂದಲೇ  ಚುನಾವಣೆ ಗೆಲ್ಲುವುದಕ್ಕೆ ಆಗೋದಿಲ್ಲ ಎಂಬುದಕ್ಕೆ ನಮ್ಮ ಕ್ಷೇತ್ರವೇ ಸಾಕ್ಷಿಯಾಗಿದೆ ಎಂದಿದ್ದಾರೆ.
ಸಚಿವ ಸ್ಥಾನದ ಬಗ್ಗೆ ಕೇಳಲಾದ ಪ್ರಶ್ನೆಗೆ. ರಾಹುಲ್ ಗಾಂಧಿ, ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಅವರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಗೆದ್ದಿದ್ದೇವೆ.
ಯಾರ ಬೆಂಬಲ ಪಡೆಯದೆ ಸರಕಾರ ರಚನೆ ಮಾಡಲಿದೆ. ಭ್ರಷ್ಟಾಚಾರ ನಿರ್ನೂಲನೆ ಮಾಡುವುದು ನಮ್ಮ  ಧ್ಯೇಯವಾಗಿದೆ.
ಸಿಎಲ್ ಪಿ ನಾಯಕರಿಂದ ಕರೆ ಬಂದಿದೆ, ಬೆಂಗಳೂರಿಗೆ ಹೋಗುತ್ತಿರುವೆ. ಉತ್ತಮ ಸ್ಥಾನದ ನಿರೀಕ್ಷೆಯನ್ನು ನಾಯಕರು ಕೊಟ್ಟಿದ್ದಾರೆ.
ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಮಾಡುತ್ತೇನೆ ಎಂದಿದ್ದಾರೆ.
ರಾಮುಲು ಅವರು ತಮ್ಮ‌ವಿರುದ್ದ ಸ್ಪರ್ಧೆ ಮಾಡಿದ್ದರ ಉದ್ದೇಶವೇನು ಎಂಬ ಪ್ರಶ್ನೆಗೆ ಗ್ರಾಮೀಣದಲ್ಲಿ ಸ್ಪರ್ಧೆ ಮಾಡಿ ರಾಮುಲು ಅವರು ತಪ್ಪು ಮಾಡಿದರು. ನಾವಿದ್ದ ಮನೆಗೆ ಬಂದು  ತೂರುವುದಕ್ಲೆ ನೋಡಿದರು.
ರಾಜ್ಯದ ನಾಯಕರೆಂದು  ಕರೆಸಿಕೊಳ್ಳುವ ಅವರು ಎಸ್ ಟಿ ಮೀಸಲು  ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ, ಹೇಗೆ ರಾಜ್ಯದ ನಾಯಕರಾಗುತ್ತಾರೆ. ಶ್ರೀರಾಮುಲು ಅವರ  ಸೋಲು  ಸಮುದಾಯದ ನಾಯಕನಾಗಿ ನನಗೂ ನೋವು‌ ತಂದಿದೆ. ಅವರು ಈ ಕ್ಷೇತ್ರಕ್ಕೆ ಬರಬಾರದಿತ್ತು ಎಂದಿದ್ದಾರೆ ನಾಗೇಂದ್ರ ಅವರು.