ಉನ್ನತ ನಾಗರಿಕ ಹುದ್ದೆಗಳ ತರಬೇತಿಗೆ ಪೂರ್ವಭಾವಿ ಪರೀಕ್ಷೆ

ಸಿರುಗುಪ್ಪ ಜ 03 : ನಗರದ ತೆಕ್ಕಲಕೋಟೆ ಎಂ.ಹೊನ್ನುರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಸ್ಥಾನೀಕರಣಕೋಶ, ತೆಕ್ಕಲಕೋಟೆ ಎಂ.ಹೊನ್ನುರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹೋಗದಲ್ಲಿ ಐ.ಎ.ಎಸ್., ಕೆ.ಎ.ಎಸ್. ಮತ್ತು ಬ್ಯಾಂಕಿಂಗ್ ತರಬೇತಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪೂರ್ವಭಾವಿ ಪರೀಕ್ಷೆಯು ನಡೆಯಿತು.
ನಂತರ ಸುದ್ದಿಗಾರೊಂದಿಗೆ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಉನ್ನತ ನಾಗರಿಕ ಹುದ್ದೆಗಳಾದ ಐ.ಎ.ಎಸ್., ಕೆ.ಎ.ಎಸ್. ಮತ್ತು ಬ್ಯಾಂಕಿಂಗ್ ತರಬೇತಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ, ಈ ಪರೀಕ್ಷೆಯಲ್ಲಿ 250 ವಿದ್ಯಾರ್ಥಿಗಳು ಭಾವಹಿಸಿದ್ದಾರೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ನಿಯಮಗಳಂತೆ ಕಟ್ಟು ನಿಟ್ಟಾಗಿ ಕ್ರಮಕೈಗೊಳ್ಳಲಾಗಿದೆ, ಸ್ಯಾನಿಟೇಜರ್, ಕಡ್ಡಾಯ ಮಾಸ್ಕ್, ಸಾಮಾಜೀಕ ಅಂತರದಲ್ಲಿ ಪರೀಕ್ಷೆಯನ್ನು ಬರೆಯುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಬಸವರಾಜ, ಸಮಾಜ ಶಾಸ್ತ್ರ ಸಹಾಯಕ ಪ್ರಾಧ್ಯಪಾಕ ಕೆ.ಎಂ.ಚಂದ್ರಕಾಂತ ಇದ್ದರು.