ಉದ್ಯೋಗ ಸೃಷ್ಟಿಸಿ ಸಮಾಜದ ಮುಖವಾಹಿನಿಗೆ ಬರಲು ಸಂಸದ ಎಸ್.ಮುನಿಸ್ವಾಮಿ ಕರೆ

ಕೋಲಾರ,ಫೆ,೨೩-ಸರ್ಕಾರವು ಎಸ್.ಸಿ.ಎಸ್.ಟಿ.ಯವರಿಗೆ ನೀಡಿರುವಂತ ಸೌಲಭ್ಯಗಳನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕು, ಸರ್ಕಾರವನ್ನು ನಾವು ಉದ್ಯೋಗ ಕೇಳುವುದಕ್ಕಿಂತ ಉದ್ಯೋಗವನ್ನು ಸೃಷ್ಠಿಸುವಂತ ಉದ್ಯಮಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗ ಬೇಕೆಂದು ಲೋಕಸಭಾ ಸದಸ್ಯ ಎಸ್. ಮುನಿಸ್ವಾಮಿ ಕರೆ ನೀಡಿದರು,
ದಲಿತ್ ಇಂಡಿಯನ್ ಚೆಂಬರ್ ಆಫ್ ಕಾಮರ್‍ಸ್ ಅಂಡ್ ಇಂಡಸ್ಟ್ರಿವತಿಯಿಂದ ನಗರದ ಸಾಯಿಧಾಮ್ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ದಲಿತ ಉದ್ಯಮಿದಾರರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ,ಎಸ್.ಸಿ. ಹಾಗೂ ಎಸ್.ಟಿ.ಗಳಲ್ಲಿನ ಉಪಜಾತಿಗಳಿಗೆ ಮಾನ್ಯತೆ ನೀಡದೆ ಎಲ್ಲರೂ ಸಂಘಟಿತರಾದರೆ ಮಾತ್ರ ಸಮಾಜದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದ ಅವರು ಕಳೆದ ೩,೫ ವರ್ಷಗಳಲ್ಲಿ ೩,೬೦ ಲಕ್ಷ ಮಂದಿಗೆ ಸುಮಾರು ೭ ಸಾವಿರ ಕೋಟಿ ರೂ ಸಾಲವನ್ನು ಬ್ಯಾಂಕ್‌ಗಳು ವಿತರಿಸಿದೆ ಎಂದು ತಿಳಿಸಿದರು.
ರಾಷ್ಟ್ರದಲ್ಲೇ ಅತಿಹೆಚ್ಚು ದಲಿತರನ್ನು ಹೊಂದಿರುವ ಕೋಲಾರ ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಐ.ಪಿ.ಎಸ್., ಐ.ಎ.ಎಸ್. ಯು.ಪಿ.ಎಸ್. ಕೆ.ಎ.ಎಸ್. ಪರೀಕ್ಷೆಗಳಿಗೆ ಪೂರಕವಾದ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಈಗಾಗಲೇ ೯ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ರಾಜ್ಯದ ಮುಖ್ಯ ಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿರುವುದಕ್ಕೆ ಸಮ್ಮತಿಸಿದ್ದಾರೆ.ಇದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು,
ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನನ್ನನ್ನು ಜಿಲ್ಲೆಯ ಜನತೆ ಬಹುಮತದಿಂದ ಆಯ್ಕೆ ಮಾಡಿದ್ದಾರೆ ಹಾಗಾಗಿ ಯಾವೂದೇ ರೀತಿ ಜಾತಿಧರ್ಮ,ಪಕ್ಷಗಳ ಬೇಧಭಾವ ಇಲ್ಲದೆ ಎಲ್ಲರನ್ನು ಸಮಾನತೆಯಿಂದ ಕಾಣುವ ಮೂಲಕ ಕಾರ್ಯನಿರ್ವಹಿಸುತ್ತಿದ್ದೇನೆ, ನನ್ನ ಬಳಿ ಕ್ಷೇತ್ರದವರು ಯಾರೇ ಅದರೂ ಸರಿ ನನ್ನಿಂದ ಅಗತ್ಯವಾದ ಸಹಕಾರವನ್ನು ಪಡೆಯಲು ಯಾವ ದಲ್ಲಾಳಿಗಳ ನೆರವು ಇಲ್ಲದೆ ನೇರವಾಗಿ ಭೇಟಿಯಾಗಿ ಪಡೆಯಬಹುದಾಗಿದೆ ಎಂದು ಹೇಳಿದರು,
ಶಾಸಕಾಂಗದಲ್ಲಿ ಮಂತ್ರಿಗಳು ಒಳ್ಳೆಯವರಾಗಿದ್ದರೂ ಕಾರ್ಯಾಂಗದಲ್ಲಿ ಕೆಲವು ಅಧಿಕಾರಿಗಳಿಗೆ ಸಮಾಜದ ಕಟ್ಟ ಕಡೆಯ ಜನತೆ ಬಗ್ಗೆ ಕಾಳಜಿ ಇಲ್ಲದೆ ಭ್ರಷ್ಟಚಾರದಲ್ಲಿ ತೊಡಗುವುದರಿಂದ ಕೆಟ್ಟ ಹೆಸರು ಮಂತ್ರಿಗಳಿಗೆ ಬರುತ್ತದೆ. ಇದರಿಂದ ಮಂತ್ರ ಸ್ಥಾನವನ್ನು ಕಳೆದು ಕೊಳ್ಳಬೇಕಾದ ಪ್ರಕರಣವು ನಡೆದಿದೆ ಎಂದರು.
ಇಷ್ಟೆ ಅಲ್ಲದೆ ರಾಜ್ಯದ ಉನ್ನತ ಅಧಿಕಾರಿ ಮಂಜುನಾಥ್ ಎಂಬುವರು ಕೋಲಾರದಲ್ಲಿನ ತಮ್ಮ ಸಂಬಂಧಿಗಳಿಗೆ ಮಾತ್ರ ೨೭ ಎಕರೆ ಜಾಗವನ್ನು ಕಾನೂನು ಬಾಹಿರವಾಗಿ ಕೈಗಾರಿಕೆ ಅಭಿವೃದ್ದಿಗೆ ಮಂಜೂರು ಮಾಡಿ ಕೊಡುವ ಮೂಲಕ ಮೀಸಲಾತಿಯಲ್ಲೂ ಜಾತಿಯತೆ ತೋರಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಹೇಳಿದರು,
ಮೀಸಲಾತಿ ಹೆಸರಿನಲ್ಲಿ ನೊರಾರು ಎಕರೆ ಪ್ರದೇಶವನ್ನು ಕೈಗಾರಿಕೆಗೆ ಎಂದು ಪಡೆದು ಅದರೆ ಬೆರಳಿಕೆ ಎಕರೆಯಷ್ಟು ಬಳಿಸಿ ಕೊಂಡು ಕೆಲವರ್ಷಗಳ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತ ರಿಯಲ್ ಎಸ್ಟೆಟ್ ಧಂಧೆಗಳು ಬಹಳಷ್ಟು ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿಪಾಸ್ತಿಗಳನ್ನು ಹೊಂದಿರುವಂತ ಬಿಲಿಯನ್‌ರ್‍ಸ್‌ಗಳು ನಮ್ಮ ದಲಿತ ಸಮುದಾಯದಲ್ಲಿ ತೆರೆಯ ಮರೆಯಲ್ಲಿರುವರು ಎಂದರು,
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೆಲವು ಯೋಜನೆಗಳಿಗೆ ಯಾವೂದೇ ಭದ್ರತೆ ಇಲ್ಲದೆ ಸುಮಾರು ೪೦ ಕೋಟಿ ರೂಗಳ ವರೆಗೆ ಸಾಲ ಸೌಲಭ್ಯವಿದೆ. ಅದರೆ ಬ್ಯಾಂಕಿನ ನಿಯಮಗಳ ಪ್ರಕಾರ ದಾಖಲೆಗಳನ್ನು ಸಲ್ಲಿಸ ಬೇಕು, ದಾಖಲೆಗಳು ಸಮರ್ಪಕವಾಗಿದ್ದು ಸಾಲವನ್ನು ನೀಡದೆ ಬ್ಯಾಂಕ್‌ಗಳು ತಿರಸ್ಕರಿಸಿದಲ್ಲಿ ನನ್ನ ಗಮನಕ್ಕೆ ತಂದರೆ ಕೊಡಲೇ ಕ್ರಮ ಕೈಗೊಂಡು ಸಾಲವನ್ನು ಕೊಡಿಸುವುದಾಗಿ ತಿಳಿಸಿದರು.
ಕೈಗಾರಿಕೆಗಳನ್ನು ಸ್ಥಾಪಿಸಲು ವಿಪುಲವಾದ ಅವಕಾಶಗಳಿದೆ. ಕಸದಿಮದ ರಸವನ್ನು ಮಾಡಬಹುದಾಗಿದೆ ಎಂಬುವದಕ್ಕೆ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವಂತ ಮಾವು ಮತ್ತು ಟಮ್ಯಾಟೋಗಳು ಕೊಳೆತರು ಸಹ ಮಾವಿನಿಂದ ರಬ್ಬರ್ ಮತ್ತು ಟಮ್ಯಾಟೋ ನಿಂದ ಬಯೋ ಗ್ಯಾಸ್ ಉತ್ಪಾದನೆ ಮಾಡಬಹುದಾಗಿದೆ, ಯಾವೂದೇ ನೀರಾವರಿ ಅವಶ್ಯಕ ಇಲ್ಲದೆ ಕತ್ತಾಳೆ ಬೆಳೆದರೂ ಮೂರು ತಿಂಗಳಿಗೆ ವಿವಿಧ ರೂಪದಲ್ಲಿ ಮಾರುಕಟ್ಟೆಗೆ ರವಾನಿಸಬಹುದಾಗಿದೆ ಎಂದು ವಿವರಿಸಿದರು,
ಸಹಕಾರ ಸಂಘಗಳ ಚುನಾವಣಾ ಆಯುಕ್ತರಾದ ಎಸ್.ಸಿ ಮುನಿಯಪ್ಪ. ಡಿ.ಐ.ಸಿ.ಸಿ.ಐ ರಾಷ್ಟ್ರೀಯ ಉಪಾಧ್ಯಕ್ಷ ಡಾ.ರಾಜಾ ನಾಯಕ್ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಕ ಪಿಚ್ಚಯ್ಯ ರಾಪುರಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಎಸ್.ಮಂಜುನಾಥ, ಎಸ್.ಬಿ.ಐ ಮುಖ್ಯ ವ್ಯವಸ್ಥಾಪಕ ಕೆ.ಅಮರೇಶ, ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕ ಬಿ.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು,
ಜಿಲ್ಲಾ ಸಂಯೋಜಕ ಎಸ್.ನಾರಾಯಣಸ್ವಾಮಿ ಪ್ರಸ್ತಾವನೆ ನುಡಿಗಳಾಡಿ, ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು,
ವೇದಿಕೆಯಲ್ಲಿ ಖಾದಿ ಕಮೀಷನ್ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬೆಳಮಾರನಹಳ್ಳಿ ಆನಂದ್ ಉಪಸ್ಥಿತರಿದ್ದರು,