ಉದ್ಯೋಗ ಸೃಷ್ಟಿಸಲು ಐಟಿ ಕಂಪನಿಗಳು ಸಹಕಾರಿ

ದಾವಣಗೆರೆ; ಫೆ .7 ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಐ.ಟಿ ಕಂಪನಿಗಳು ಸಹಕಾರಿ ಎಂದು ಲೋಕಸಭಾ ಸಂಸದರಾದ ಜಿ.ಎಂ ಸಿದ್ದೇಶ್ವರ ಅವರು ಹೇಳಿದರು.
ನಗರದ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಯು. ಕೆ ಇನ್ಫೋಸೈಟ್ ಕನ್ಸಲ್ಟಿಂಗ್ ಗ್ರೂಪ್‍ನ  ಇನ್ನೋವೇಷನ್ ಲ್ಯಾಬ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ  ಐ.ಟಿ ಕಂಪನಿ ಸ್ಥಾಪಿಸಿರುವುದು ಸಂತಸ ತಂದಿದೆ. ಐಟಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು ಹಾಗೂ ಹೆಚ್ಚಿನ ಎಂ.ಎನ್.ಸಿ ಕಂಪನಿಗಳೂ  ಆರಂಭವಾಗಬೇಕು  ಎಂದರು.ಲಂಡನ್ ಇನ್ಫೋಸೈಟ್ ಕನ್ಸಲ್ಟಿಂಗ್ ಸ್ಥಾಪಕ ವೀರೇಶ್ .ಕೆ ಬೆಳ್ಳೂಡಿ ಮಾತನಾಡಿ, ಕಂಪನಿಯು ಲಂಡನ್‍ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು,  ಜರ್ಮನಿ, ಭಾರತ, ಮಲೇμÁ್ಯ, ಸಿಂಗಪುರ್ ಮತ್ತು ಹಾಂಗ್ ಕಾಂಗ್‍ನಲ್ಲಿ 10 ವರ್ಷಗಳಿಂದ ಕಚೇರಿ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಜಿಲ್ಲೆಯಲ್ಲಿ (ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ನಲ್ಲಿ ತನ್ನ ಇನ್ನೋವೇಶನ್ ಲ್ಯಾಬ್  ತೆರೆಯುತ್ತಿದೆ.ಇದು ಜಿಲ್ಲೆಯಲ್ಲಿ ಮೊದಲನೇ ಎಂ.ಎನ್.ಸಿ ಕಂಪನಿಯಾಗಿದೆ ಎಂದರು.ಕಂಪನಿಯ ವಿಶಾಲ ಉದ್ದೇಶಗಳು ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಿ ಸಾಗರೋತ್ತರ ಗ್ರಾಹಕರ ಅಗತ್ಯಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ. ಇನ್ಫೋಸೈಟ್ ಕನ್ಸಲ್ಟಿಂಗ್ ಎನ್ನುವುದು ಕಂಪನಿಯು ಎಸ್.ಎ.ಪಿ ಅನುμÁ್ಠನ, ರೋಲ್‍ಔಟ್‍ಗಳು, ಅಭಿವೃದ್ಧಿ ಮತ್ತು ಬೆಂಬಲ ಸೇವೆಗಳಲ್ಲಿ ಪರಿಣತಿಯನ್ನು ಹೊಂದಿದ್ದು, ಇದು ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಡಿಜಿಟಲೀಕರಣಕ್ಕೆ  ಸಹಾಯ ಮಾಡುತ್ತದೆ ಎಂದರು.