ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದು ತಮ್ಮ ಬಹುದೊಡ್ಡ ಕನಸು:ನಡಹಳ್ಳಿ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ:ಎ.17: ಪಟ್ಟಣ ಸೇರಿದಂತೆ ಸಮಗ್ರ ತಾಲೂಕಿನ ಸರ್ವತೋಮುಖಂಅಭಿವೃದ್ಧಿ ಪಡಿಸುವ ಮೂಲಕ ಎಲ್ಲ ವರ್ಗದ ಜನರಿಗೂ ಸರಕಾರದ ಮೂಲಬೂತ ಸೌಲಭ್ಯಗಳನ್ನು ದೊರಕುವಂತೆ ಮಾಡುವುದರ ಜತೆಗೆ ಉದ್ಯೋಗ ಸೃಷ್ಠಿಗೆ ಕೈಗಾರಿಕೋದ್ಯಮ ಸ್ಥಾಪಿಸುವುದು ನನ್ನ ಬಹುದೊಡ್ಡ ಕನಸಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು.

ಪಟ್ಟಣದ ಇಲ್ಲಿನ ಖಾಸಗಿ ಮಾಲಿಕತ್ವದ ಸಾರ್ವಜನಿಕ ಗ್ರಂಥಾಲದ ನೂತನ ವಾಣಿಜ್ಯ ಮಳಿಗೆಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಸಾರ್ವಜನಿಕ ಗ್ರಂಥಾಲಯ ಬಡವರಿಗೆ ಮತ್ತು ವಯಸ್ಕರಿಗೆ ಬುದ್ದಿ ಜೀವಿಗಳಿಗೆ ಜ್ಞಾನದ ದೇಗುಲವಿದ್ದಂತೆ ಈ ನಿಟ್ಟಿನಲ್ಲಿ ಕೆಲ ಹಿರಿಯರು ಪ್ರಜ್ಞಾವಂತರ ಸೇರಿಕೊಂಡು ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿದ್ದು ನಿಜಕ್ಕೂ ಶ್ಲಾಘನಿಯ.

ಪಟ್ಟಣದಲ್ಲಿ ಸುಮಾರು 23 ಕೋಟಿ ವಿಶೇಷ ಅನುದಾನದಲ್ಲಿ ಒಟ್ಟು 62 ಉದ್ಯಾನವನಗಳ ನಿರ್ಮಣಗೊಳಿಸಲು ಈಗಾಗಲೇ ಸಿದ್ದತೆ ನಡೆದಿದೆ. ಬನಶಂಕರಿ ವೃತ್ತದಿಂದ ನಾಲತವಾಡ ರಸ್ತೆ ಮಾರ್ಗ ಹೊರ ಒಲಯದವರೆಗೂ ದ್ವೀಪಥ ಗುಣಮಟ್ಟ ರಸ್ತೆ, ಬಸವೇಶ್ವರ ವೃತ್ತದಿಂದ ನಿಡಗುಂದಿಯವರೆಗೆ ದ್ವೀಪಥ ರಸ್ತೆ ನಿರ್ಮಸಲು ಸುಮಾರು 98 ಕೋಟಿಗಳ ವಿಶೇಷ ಅನುದಾನ ನೀಡಬೇಕು ಎಂದು ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿತ್ತು ಅದುಕೂಡ ಆದಷ್ಟು ಬೇಗ ಮಂಜುರಾತಿ ದರೆಯಲಿದೆ ಶಿಗೃದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು.

ಅದರಂತೆ ಶಿಕ್ಷಣ ಇಲಾಖೆ ಸಂಬಂಧಿಸಿದಂತೆ ಶಾಲಾ ಕಟ್ಟಡ ನಿಮಾಣಕ್ಕಾಗಿ ಸುಮಾರು 38 ಕೋಟಿಗಳ ಅನುದಾನ ಮಂಜುರಾತಿ ಪಡೆದು ಸಧ್ಯ ಕಾಮಗಾರಿ ಪ್ರಗತಿಯಲ್ಲವೇ, ಸಾರ್ವಜನಿಕರಿಗೆ ಮತ್ತು ವ್ಯವಸಾಯ ಮಾಡುವ ರೈತರಿಗೆ ತಾಲೂಕಿನಲ್ಲಿ ಸಮರ್ಪಕ ವಿದ್ಯುತ್ ಒದಗಿಸಲು 280 ಕೋಟಗಳ ವೆಚ್ಚದಲ್ಲಿ ಈಗಾಗಲೇ 5 ಕಡೆಗಳಲ್ಲಿ ವಿದ್ಯತ್ ಪ್ರಸರಣಾ ಘಟಕ ಸ್ಥಾಪನೆ ಮಾಡಲಾಗುತ್ತಿದೆ,

ಇಢಿ ತಾಲೂಕಿನ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅಂದಾಜು 800 ಕೋಟ ವೆಚ್ಚದಲ್ಲಿ ಜನರಿಗೆ 24 ಗಂಟೆ ಶುದ್ಧ ಕುಡಿಯುವ ನೀರು ಮನೆ ಮನೆಗೇ ಕೊಡುವ ವ್ಯವಸ್ಥೇ ಕೈಗೊಳ್ಳಲಾಗಿದೆ ಪ್ರಥಮ ಹಂತದಲ್ಲಿ ಸಧ್ಯ 36 ಗ್ರಾಮಗಳಿಗೆ ಟೆಂಡರ್ ಕರೆಯಲಾಗಿದೆ. ಸಧ್ಯ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.

ಈ ಹಿಂದೆ ಪಟ್ಟಣದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಸಿದ್ದಾರೆ ಆದರೇ ನಾನು ಶಾಸಕನಾದ ಮೇಲೆ ಸಧ್ಯ ಪಟ್ಟಣದಲ್ಲಿ ಸಿಸಿ ರಸ್ತೆಗಳು ಪ್ರಾರಂಭಗೊಂಡು ಮುಕ್ತಾಯ ಹಂತದಲ್ಲಿವೇ ಯಾರನ್ನೂ ವಯಕ್ತಿಕವಾಗಿ ಆರೋಪ ಮಾಡುತ್ತಿಲ್ಲ. ಗುಣಮಟ್ಟ ರಸ್ತೆ ಕಾಮಗಾರಿಯನ್ನು ನೋಡಿ ಸಾರ್ವಜನಿಕರಿಂದ ಒತ್ತಮ ಪ್ರತಿಕ್ರೀಯೇ ವ್ಯಕ್ತವಾಗುತ್ತಿದೆ.

ಹೀಗೇ ಇನ್ನೂ ಅಹಲವು ರೀತಿಯ ಅಭಿವೃದ್ಧಿ ಪತದತ್ತ ಕೊಂಡ್ಯೋಯುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೇ ಪ್ರತಿಭಾ ಅಂಗಡಗೇರಿ, ಗ್ರಂಥಾಲದ ಸಂಘದ ಅಧ್ಯಕ್ಷ ಬಾಬು ಬಿರಾದಾರ, ಡಿಸಿಸಿ ಬ್ಯಾಂಕ ನಿರ್ಧೇಶಕ ಸೋಮನಗರ್ಗವಡ ಬಿರಾದಾರ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಪಿ ಎಸ್ ಎಂ ಬಿ ಬಿರಾದಾರ, ನ್ಯಾಯವಾದಿಗಳಾದ ಎಡಂ ಎಚ್ ಹಾಲಣ್ಣವರ, ಬಿ ಜಿ ಜಗ್ಗಲ್ ಆರ್ ಬಿ ಪಾಟೀಲ,ಸೇರಿದಂತೆ ಹಲವರು ಇದ್ದರು. ಬಸವರಾಜ ನಾಲತವಾಡ ನಿರೂಪಿಸಿದರು, ಸಾಹಿತಿ ಎಸ್ ಬಂಗಾರಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ಬಾಪುಗೌಡ ಪಾಟೀಲ ವಂದಿಸಿದರು