ಉದ್ಯೋಗ ಸುಧಾರಣೆ ತಜ್ಞರ ಇಂಗಿತ

ಮುಂಬೈ, ಜ.೪- ಕೊವಿಡ್ ಸೋಂಕಿನ ನಂತರವೂ ಉದ್ಯೋಗ ನೀಡಿಕೆ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಳವಾಗಿಲ್ಲ. ಪೂರ್ವ-ಸಾಂಕ್ರಾಮಿಕ ಮಟ್ಟಕ್ಕೆ ಮರಳಲು ಇನ್ನೂ ಕೆಲವು ಸಮಯದ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಸಿಇಡಿಎ- ಸಿಎಂಐಇ ವರದಿಯ ಪ್ರಕಾರ ೨೦೨೦ ಕ್ಕೆ ಹೋಲಿಸಿದರೆ, ೨೦೨೨ ರ ಅಕ್ಟೋಬರ್ ನಲ್ಲಿ ಸುಮಾರು ೧.೪ ಕೋಟಿಗೂ ಕಡಿಮೆ ಮಂದಿ ಉದ್ಯೋಗದಲ್ಲಿದ್ದಾರೆ. ಇದರಲ್ಲಿ ೪೫ ಲಕ್ಷ ಕಡಿಮೆ ಪುರುಷರು ಮತ್ತು ೯೬ ಲಕ್ಷ ಮಹಿಳೆಯರು ಸೇರಿದ್ದಾರೆ ಎಂದು ಹೇಳಿದೆ.
ದತ್ತಾಂಶದ ಮೇಲಿನ ವರದಿ ವಿಶ್ಲೇಷಣೆ ಮಾಡಿದ ಅಶೋಕ ವಿಶ್ವವಿದ್ಯಾಲಯದ ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆ ಕೇಂದ್ರ ಮತ್ತು ಭಾರತೀಯ ಆರ್ಥಿಕತೆಯ ನಿರ್ವಹಣಾ ಕೇಂದ್ರ ಈ ವಿಷಯ ಹೊರ ಹಾಕಿದೆ.ಕೋವಿಡ್ ಸೋಂಕಿನಿಂದ ಅನೇಕ ಸಂಸ್ಥೆಗಳು ತಮ್ಮ ಸಿಬ್ಬಂದಿಯನ್ನು ಕಡಿತ ಮಾಡಿದವು. ವೈಯಕ್ತಿಕ ಹಣಕಾಸು ಹರಿವು ಮತ್ತು ಉದ್ಯೋಗದ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಪರಿಶೀಲಿಸಿ ಸಮೀಕ್ಷೆಯಲ್ಲಿ ವಿಷಯ ತಿಳಿಸಲಾಗಿದೆ ಎಂದು ಲೇಖಕರಾದ ಪ್ರೀತಾ ಜೋಸೆಫ್ ಮತ್ತು ರಶಿಕಾ ಮೌದ್ಗಿಲ್ ತಿಳಿಸಿದ್ದಾರೆ.

ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ
೧೫-೩೯ ವರ್ಷದ ಉದ್ಯೋಗಿಗಳು ಹೆಚ್ಚು ತೊಂದರೆಗೆ ಸಿಲುಲಿದ್ದಾರೆ . ೨೦೨೨ ರ ಅಕ್ಟೋಬರ್ ಹೊತ್ತಿಗೆ,೧೫ ರಿಂದ ೩೯ ವಯೋಮಾನದ ಸುಮಾರು ಶೇ.೨೦ ಮಂದಿ ಮಾತ್ರ ಉದ್ಯೋಗದಲ್ಲಿದ್ದಾರೆ ಎಂದು ತಿಳಿಸಲಾಗಿದೆ.
೨೦೨೦ ಜನವರಿಗೆ ಇದ್ದ ಉದ್ಯೋಗಿಗಳ ಸಂಖ್ಯೆಗೆ ಹೋಲಿಸಿದರೆ ೩೬.೫ ದಶಲಕ್ಷ ಮಂದಿ ಉದ್ಯೊಗ ಕಳೆದುಕೊಂಡಿದ್ದಾರೆ.ಇದರಲ್ಲಿ ೪೦ ರಿಂದ ೫೯ ವರ್ಷದ ಶೇ.೧೨ ರಷ್ಟು ಮಂದಿ ಇದ್ದಾರೆ ಎಂದು ತಿಳಿಸಲಾಗಿದೆ. ವಯಸ್ಸಾದ ಮಂದಿಯ ಕೌಶಲ್ಯ ಬಳಸಿಕೊಂಡು ತಮ್ಮ ಹಿಂದಿನ ಉದ್ಯೋಗಗಳನ್ನು ಉಳಿಸಿಕೊಳ್ಳುತ್ತಿದ್ದಾರೆ ಅಥವಾ ಹಿಂತಿರುಗುತ್ತಿದ್ದಾರೆ” ಎಂದು ಸಿಎಂಐಇನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳುತ್ತಾರೆ.
ಆರಂಭಿಕ ಲಾಕ್‌ಡೌನ್ ತಿಂಗಳುಗಳ ನಂತರ ಕಳೆದ ಮೂರು ವರ್ಷಗಳಲ್ಲಿ ನಗರ ಉದ್ಯೋಗ ತುಲನಾತ್ಮಕವಾಗಿ ಸ್ಥಿರವಾಗಿದೆ. ಆದರೂ ಹಿಂದಿನ ಪರಿಸ್ಥಿತಿಗೆ ಬರಲು ಹಲವು ಸಮಯ ಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಸುಮಾರು ೧೪೭ ದಶಲಕ್ಷ ಉದ್ಯೋಗಿಗಳನ್ನು ಹೊಂದಿರುವ ಸೇವಾ ವಲಯ ದೇಶದ ಅತಿದೊಡ್ಡ ಉದ್ಯೋಗದಾತರಾಗಿ ಉಳಿದಿದೆ ಆದರೆ ಸಾಂಕ್ರಾಮಿಕ ಪೂರ್ವ ಉದ್ಯೋಗದ ಮಟ್ಟವನ್ನು ಇನ್ನೂ ಮರಳಿ ಪಡೆದಿಲ್ಲ ಎಂದು ಅದು ಹೇಳಿದೆ,
ಸೇವೆಗಳಲ್ಲಿ, ಸಗಟು ಮತ್ತು ಚಿಲ್ಲರೆ ವ್ಯಾಪಾರವು ಈಗ ೭೦ ದಶಲಕ್ಣ ಗಿಂತಲೂ ಹೆಚ್ಚು ಉದ್ಯೋಗಿ ಹೊಂದಿದೆ, ಇದು ೨೦೧೮-೧೯ ರ ಹಣಕಾಸು ವರ್ಷದಲ್ಲಿ ೫೯ ದಶಲಕ್ಷಕ್ಕೆ ಹೋಲಿಸಿದರೆ ಈಗಿನ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆ ಇದೆ.