ಉದ್ಯೋಗ ವಿನಿಮಯ ಕಚೇರಿಯಲ್ಲಿ ಕಳವು

ಕಲಬುರಗಿ,ಆ.30-ಇಲ್ಲಿನ ವೆಂಕಟೇಶ ನಗರದಲ್ಲಿರುವ ಉದ್ಯೋಗ ವಿನಿಮಯ ಕಚೇರಿಯ ಹಿಂದಿನ ಕಿಟಕಿ ಮುರಿದು ಕಳ್ಳರು ಒಳ ನುಗ್ಗಿ ಬಾತ್ ರೂಮ್ ಒಳಗಡೆ ಇದ್ದ 6,500 ರೂ.ಮೌಲ್ಯದ 6 ನೀರು ಬರುವ ನಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಕಚೇರಿಯ ಸಹಾಯಕ ನಿರ್ದೇಶಕಿ ಭಾರತಿ ವಿಶ್ವನಾಥ ಸಿಂಗ್ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.