ಕಲಬುರಗಿ,ಅ.31:”ಹತ್ತನೇ ಉದ್ಯೋಗ ಮೇಳದಲ್ಲಿ ಸಿಯುಕೆಯ ಹನ್ನೆರಡು ಅಧ್ಯಾಪಕರಿಗೆ ನೇಮಕಾತಿ ಪತ್ರವನ್ನು ನಿಡಲಾಯಿತೆ” ಎಂದು ಸಿಯುಕೆಯ ಕುಲಸಚಿವ ಪೆÇ್ರ. ಆರ್ ಆರ್ ಬಿರಾದಾರ ಹೇಳಿದರು. ಅಕ್ಟೋಬರ್ 28 ರಂದು ಬೆಂಗಳೂರಿನಲ್ಲಿ ನಡೆದ ಕೇಂದ್ರ ಸರಕಾರದ ಉದ್ಯೋಗ ಮೇಳದಲ್ಲಿ ಸಿಯುಕೆ ಭಾಗವಹಿಸಿರುವ ಕುರಿತು ಮಾತನಾಡಿದ ಅವರು, ಸಿಯುಕೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಮಿಷನ್ ಮೋಡ್‍ನಲ್ಲಿ ನೇಮಿಸಿಕೊಳ್ಳುತ್ತಿದೆ. ಈ ಉದ್ಯೋಗ ಮೇಳದಲ್ಲಿ ಎಂಟು ಸಹಪ್ರಾಧ್ಯಾಪಕರು ಹಾಗೂ ನಾಲ್ವರು ಪ್ರಾಧ್ಯಾಪಕರು ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ಶ್ರೀ ನಾರಾಯಣ ರಾಣೆ ಅವರಿಂದ ನೇಮಕಾತಿ ಪತ್ರ ಪಡೆದರು” ಎಂದು ಅವರು ಹೇಳೀದರು. ಪೆÇ್ರ.ಬಿರಾದಾರ್ ಅವರು ಸಿಯುಕೆಯ ಪ್ರತಿನಿಧಿಯಾಗಿ ರೋಜಗಾರ್ ಮೇಳದಲ್ಲಿ ಭಾಗವಹಿಸಿದರು. ಸಿಯುಕೆಯ ಜೊತೆಗೆ, ಇತರ ಹತ್ತು ಕೇಂದ್ರ ಸರ್ಕಾರದ ಇಲಾಖೆಗಳು ಈ ಮೇಳದಲ್ಲಿ ಭಾಗವಹಿಸಿದ್ದವು.
ನೇಮಕಾತಿ ಕುರಿತು ಮಾತನಾಡಿದ ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣರವರು, ”ಸುಧಾರಿತ ಕಲಿಕೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಗುಣಮಟ್ಟ ಬಹಳ ಮುಖ್ಯ. ನಮ್ಮ ಶಿಕ್ಷಕರನ್ನು ಅಖಿಲ ಭಾರತ ಮಟ್ಟದ ಮುಕ್ತ ಸ್ಪರ್ಧೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆಯಾ ವಿಷಯಗಳ ತಜ್ಞರು ಉತ್ತಮ ಮತ್ತು ಅರ್ಹ ಶಿಕ್ಷಕರನ್ನು ಆಯ್ಕೆ ಮಾಡಿದ್ದಾರೆ. ಅವರು ಈ ವಿಶ್ವವಿದ್ಯಾಲಯವನ್ನು ಹೊಸ ಶೈಕ್ಷಣಿಕ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ಕಳೆದ ಎರಡು ಸುತ್ತುಗಳಲ್ಲಿ ನಾವು 55 ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಮತ್ತು ಉಳಿದ ಹುದ್ದೆಗಳಿಗೆ ತಕ್ಷಣವೇ ಮರು-ಅಧಿಸೂಚನೆ ಮಾಡಲಾಗುವುದು ಮತ್ತು ಶೀಘ್ರದಲ್ಲೇ ಅವುಗಳನ್ನು ಭರ್ತಿ ಮಾಡಲಾಗುವುದು. ನಾವು ಕೆಲ ಹೊಸ ವಿಭಾಗಗಳನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅದು ಅನುಮೋದನೆಯಾದರೆ ಆ ಹುದ್ದೆಗಳಿಗೂ ಅಧಿಸೂಚನೆ ಹೊರಡಿಸಲಾಗುವುದು” ಎಂದು ಅವರು ಹೇಳಿದರು.