ಬೀದರ್:ಜೂ.26: ನಗರದ ಸಾಯಿ ಗ್ರೌಂಡ್ ನಲ್ಲಿ ಇಂಡಿಯನ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನಿರುದ್ಯೋಗ ಚಾಲಕರಿಗೆ ಉದ್ಯೋಗ ಮೇಳ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಜಯ ಜಾಗಿರದಾರ ಅವರು ಹೈದರಾಬಾದ್ ಲಿಥಿಮ ಅರ್ಬನ್ ಟೆಕ್ನಾಲಜಿ ಅವರ ಜೊತೆ ಇಂಡಿಯನ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ಅವರ ಸಂಯೋಗದಲ್ಲಿ ಇಂದು 25 ಹಾಗೂ ನಾಳೆ 26ರಂದು ಬೀದರ್ ನಗರದ ಸಾಯಿ ಸ್ಕೂಲ್, ಮೈದಾನದಲ್ಲಿ ಬೀದರ್ ಜಿಲ್ಲೆಯ ನಿರುದ್ಯೋಗಿ ಚಾಲಕರಿಗೆ ಉದ್ಯೋಗ ಕುಡಿಸುವ ಕಾರ್ಯಕ್ರಮ ಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ನಿರುದ್ಯೋಗ ಚಾಲಕರು ಪಡೆದುಕೊಳ್ಳಬೇಕೆಂದು ಸಂಜಯ ಜಾಗಿರದಾರ ಅವರು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಮಂತ್ ಕಟ್ಟಿಮನಿ ,ಜೀವನ ಜಾಗಿರದಾರ, ಜೆಸನ್ ಮೂಡಿ, ಪ್ರಶಾಂತ್ ಗುತ್ತೇದಾರ,ಸುಧಾಕರ ಕೊಳ್ಳುರ, ಮಲಾಕಿ ಹೈದರಾಬಾದ, ಜಾಕುಬ, ಸ್ವಾಮಿದಾಸ್ ಮುಸ್ತಾಪುರ,ಅನಿಷ್ ಹಾಗೂ ಅಜಯ ಮುಂತಾದರೂ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಪೆÇಲೀಸಬ್ಬಂದಿಗಳು ಹಾಗೂ ಮಾಧ್ಯಮ ಮಿತ್ರರು ಹಾಗೂ ಅನೇಕ ಉದ್ಯೋಗ ಆಕಾಂಕ್ಷಿಗಳು ಉಪಸ್ಥಿತರಿದ್ದರು.