ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.17: ತಾಲ್ಲೂಕಿನ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ರಾಜ್ಯ ಘಟಕದ ವತಿಯಿಂದ ನೂತನ ಸರಕಾರಕ್ಕೆ ತಾಲೂಕು ಪಂಚಾಯತಿಯ ಅಧಿಕಾರಿ ಇವರಿಗೆ ಮನವಿ ಸಲ್ಲಿಸಿದರು.
ನಗರದ ತಾಲೂಕು ಪಂಚಾಯತಿ ಕಾರ್ಯಾಲಯದ ಮುಂದೆ ರಾಜ್ಯ ಮಸಣ ಕಾರ್ಮಿಕರಿಂದ ಪ್ರತಿಭಟನೆ ನಡೆಸಿದರು ,ಮೊದಲನೆಯದಾಗಿ,ನೂತನ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ರಾಜ್ಯ ಘಟಕದವತಿಯಿಂದ
ಬಹುತೇಕ ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಮಸಣ ಕಾರ್ಮಿಕರು ಸಂಘಟಿತರಾಗಿ, ಸಾವಿರಾರು ವರ್ಷಗಳಿಂದ ನಮಗಾದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಲು ಕೋರಿ ಹಲವು ಬಾರಿ ಇದುವರೆಗೆ ಹಲವು ಸರಕಾರಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಸರಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಾವು ಬದುಕುತ್ತಿರುವ ದಯನೀಯ ಸ್ಥಿತಿ ಮತ್ತು ಬಿಟ್ಟಿ ಚಾಕರಿಯಿಂದ ಇದುವರೆಗೆ ಮುಕ್ತಿ ನೀಡಲಿಲ್ಲ. ತಮ್ಮ ಸರಕಾರ ನಮ್ಮಹಕ್ಕೊತ್ತಾಯಗಳನ್ನು ಪರಿಗಣಿಸಿ ನಮಗೆ ನ್ಯಾಯ ಒದಗಿಸುವಂತೆ ಈ ಮೂಲಕ ವಿನಂತಿಸುತ್ತೇವೆ. ರಾಜ್ಯದಾದ್ಯಂತ ಲಕ್ಷಾಂತರ ಕುಟುಂಬಗಳಿದ್ದೇವೆ. ಪ್ರತಿ ತಾಲೂಕು ಪ್ರದೇಶದಲ್ಲಿ ಸಾವಿರದಷ್ಟು ಕುಟುಂಬಗಳಿದ್ದೇವೆ.
ಮಸಣಗಳನ್ನು ನಾವುಗಳೇ ನಿಯಮಿತವಾಗಿ ಬಿಟ್ಟಿಯಾಗಿ ವಂಶ ಪಾರಂಪರ್ಯವಾಗಿ ನಿರ್ವಹಿಸುತ್ತಾ ಬಂದಿದ್ದೇವೆ. ನಾಗರೀಕರ ಶವಗಳನ್ನು ಹೂಳಲು ಮಸಣಗಳಿಗೆ ಬರುವವರಿಗೆ ಹಾದಿ ನಿರ್ಮಿಸುವುದು, ಕುಳಿತುಕೊಳ್ಳಲು ಬಯಲು ಸ್ಥಳ ಮಾಡಿ ಕೊಡುವುದು ಮುಂತಾಗಿ, ಈ ಎಲ್ಲ ಕೆಲಸಗಳು ಉಚಿತವೇ ಆಗಿವೆ, ಬಹುತೇಕ ಬಡತನವೇ ರಾಜ್ಯದ ಪ್ರಮುಖ ಭಾಗವಾಗಿರುವಾಗ ಮತ್ತು ಸರ್ಕಾರದ ಸಹಾಯವಿಲ್ಲದೇ ಹೂಳಲಾಗದ ಸಂದರ್ಭದಲ್ಲಿ ನಾಗರೀಕರಿರುವಾಗ ನಮಗೆ ವೇತನ,ಮಸಣಗಳ ಕೆಲಸದಲ್ಲಿ ತೊಡಗಲು ಕೊಡುವ ಸಹಾಯವನ್ನೇ ಕೂಲಿಯೆಂದು ಪರಿಗಣಿಸಲಾಗಿದೆ.
ಗ್ರಾಮ ಪಂಚಾಯತ್ ಅಥವಾ ಯಾವುದೇ ಸ್ಥಳೀಯ ಸಂಸ್ಥೆಗಳು ಮಸಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮವಹಿಸುತ್ತಿಲ್ಲ. ಅವುಗಳು ನಾಗರೀಕರ ಆರೋಗ್ಯ ಸಂರಕ್ಷಣೆಯ ಧಾಮಗಳಾಗಿವೆ. ಮತ್ತು ಅವುಗಳ ಸಮರ್ಪಕ ನಿರ್ವಹಣೆಯು ಜನತೆಯ ನಡುವೆ ಮಸಣಗಳ ವಿಷಯದಲ್ಲಿರುವ ಭೀತಿಯನ್ನು ಮತ್ತು ಮೌಡ್ಯವನ್ನು ತೊಲಗಿಸಲಿದೆ. ಆದರೇ ಈ ಕೆಲಸವನ್ನು ಸ್ಥಳೀಯ ಸಂಸ್ಥೆಗಳಾಗಲೀ, ರಾಜ್ಯ ಸರಕಾರವಾಗಲೀ ಗಂಭೀರವಾಗಿ ಪರಿಗಣಿಸದಿರುವುದು ವಿಷಾಧನೀಯ ಅದ್ದರಿಂದ ಮಸಣಗಳು ತೀವ್ರ ಒತ್ತುವರಿಯಾಗಿರುವುದರಿಂದ ಅಲ್ಲಿ ಕಾರ್ಯ ನಿರ್ವಹಿಸುವ ನಾವು ಸಾಕಷ್ಟು ಸಂಕಷ್ಠವನ್ನು ಅನುಭವಿಸಬೇಕಾಗುತ್ತದೆ. ಘಾಟು ವಾಸನೆಯಿಂದ ಅರೆ ಬೆಂದ ವಿಕಾರ ರೂಪಿ ಹೆಣಗಳನ್ನು ಬರಿಗೈಯ್ಯಲ್ಲಿ ಕಿತ್ತೆಸೆದು, ಹೊಸ ಶವಗಳಿಗೆ ಸ್ಥಳ ಮಾಡ ಬೇಕಾಗುತ್ತದೆ. ಮಗಾವ ಸುರಕ್ಷತಾ ಕ್ರಮಗಳಿರುವುದಿಲ್ಲ.
ಮಸಣಗಳೆಂದರೇ ದೆವ್ವಗಳ ವಾಸ ಸ್ಥಳಗಳೆಂಬ ಭಯವು ನಮ್ಮನ್ನು ಮತ್ತು ನಾಗರೀಕರನ್ನು ಕಾಡುತ್ತಿದೆ. ಇಂತಹ ಎಲ್ಲಾ ಭೀತಿಯಿಂದ ಮುಕ್ತವಾಗಲು ಮತ್ತು ಮಸಣಗಳನ್ನು ನಂದನ ವನಗಳಂತೆ ನೋಡಿಕೊಳ್ಳಲು, ಮಸಣಗಳ ನಿರ್ವಣೆಗಾಗಿ ನಿರ್ವಾಹಕರ ಅಗತ್ಯವಿದೆ ಮತ್ತು ನಾವು ದಲಿತರೆಂಬ ಕಾರಣಕ್ಕೆ ಸಾವಿರಾರು ವರ್ಷಗಳಿಂದ ಈ ಸಮಾಜ ನಮ್ಮ ಮೇಲೆ ಹೇರಲಾದ ಈ ಬಿಟ್ಟಿ ಚಾಕರಿಯಿಂದ ನಮಗೆ ಮುಕ್ತಿ ಬೇಕಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮನ್ನು ಮಸಣಕ್ಕೊಬ್ಬರಂತೆ ಮಸಣ ನಿರ್ವಾಹಕರೆಂದು ನೇಮಿಸಿಕೊಳ್ಳುವ ಮೂಲಕ ಉದ್ಯೋಗ ಭದ್ರತೆ ಮತ್ತು ವೇತನ ನೀಡುವ ಮತ್ತು ನಾಗರೀಕರ ಸಮಸ್ಯೆಗಳನ್ನು ನಿವಾರಿಸಲು ಕುರಿತು ಸರಕಾರ ಸೂಕ್ತ ಕ್ರಮ ವಹಿಸಲು ಈ ಮೂಲಕ ವಿನಂತಿಸಿದರು.
ಯು.ಬಸವರಾಜ ಸಂಚಾಲಕ, ಬಿ.ಮಾಳಮ್ಮ ಸಹ ಸಂಚಾಲಕ, ಎನ್. ರಾಜಣ್ಣ ಸಹ ಸಂಚಾಲಕ, ಮುನಿಯಪ್ಪ ಸಹ ಸಂಚಾಲಕ, ಎ.ಸ್ವಾಮಿ ಸಹ ಸಂಚಾಲಕ, ಬಾಳು ರಾಠೋಡ್ ಸಹ ದಂಚಾಲಕ, ನಿರುಪಾದಿ ಸಹ ಸಂಚಾಲಕ, ಕೆ.ಜಿ.ವೀರೇಶ್ ಸಹ ಸಂಚಾಲಕ ಇದ್ದರು