ಉದ್ಯೋಗ ಖಾತ್ರೆ ಕಾಮಗಾರಿ : ಶಾಲಾ ಮಕ್ಕಳು ಬಾಗಿ-ಪಿಡಿಓ ತರಾಟೆ

ಸಿಂಧನೂರು,ಜೂ.೭- ಜಾಬ್ ಕಾರ್ಡ್ ಇದ್ದವರು ಮನೆಯಲ್ಲಿ ಇಲ್ಲದವರು ಹಾಗೂ ಶಾಲಾ ಮಕ್ಕಳು ನೆರೇಗಾ ಕೆಲಸದಲ್ಲಿ ಕಾನೂನು ಬಾಹೀರವಾಗಿ ತೊಡಗಿದ್ದನ್ನು ಕಂಡು ಗಾ.ಪ ಅಧ್ಯಕ್ಷರು, ಪಿ.ಡಿ.ಓ ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋಗಿ ಕೆಲಸ ಬಿಡಿಸಿ ಮಕ್ಕಳನ್ನು ಮನೆಗೆ ಕಳುಹಿಸಿದ ಘಟನೆ ಭೀಮರಾಜ್ ಕ್ಯಾಂಪ್‌ನಲ್ಲಿ ನಡೆದಿದೆ.
ತಾಲೂಕಿನ ಗೊರೆಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಭೀಮರಾಜ್ ಕ್ಯಾಂಪ್‌ನಲ್ಲಿ ಉದ್ಯೋಗ ಖಾತ್ರೆ ಯೋಜನೆ ಕೆಲಸ ನಡೆದಿದ್ದು ಅದರಲ್ಲಿ ೧೨ ಶಾಲಾ ಮಕ್ಕಳು ೪೦ ಕ್ಕೂ ಮೇಲ್ಪಟ್ಟು ಜಾಬ್ ಕಾರ್ಡ್ ಇಲ್ಲದವರು ಕೆಲಸದಲ್ಲಿ ತೊಡಗಿದ್ದು ಕಾನೂನು ಬಾಹೀರ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿ.ಪ್ರಮೀಳ, ಪಿ.ಡಿ.ಓ ವನಜಾಕ್ಷಿ ಕೆಲಸಕ್ಕೆ ಕರೆದು ಕೊಂಡು ಬಂದ ಮೇಟಿಗಳನ್ನು ತರಾಟೆಗೆ ತಗೆದು ಕೊಂಡು ಅವರನ್ನು ಮನೆಗೆ ಕಳುಹಿಸಿದರು.
ಸಾಸಲಮರಿ ಬಸವನಗೌಡ ಮನೆಯಿಂದ ಮನೋಹರ ರೆಡ್ಡಿ ಮನೆ ತನಕ ೩ ಲಕ್ಷದ ಗಿಡ ನಡೆಲು ತೆಗ್ಗು ತೋಡುವುದು ಮನೋಹರ ರೆಡ್ಡಿ ಮನೆಯಿಂದ ಸುಡುಗಾಡಿನ ತನಕ ೩ ಲಕ್ಷದಲ್ಲಿ ಗಿಡ ನೆಡುವ ತೆಗ್ಗು ತೋಡುವ ಎರಡನೇ ಕಾಮಗಾರಿ ಕೆಲಸ ನಡೆದಿದ್ದು ಜಾಬ್ ಕಾರ್ಡ್ ಇದ್ದವರು ಮನೆಯಲ್ಲಿ ಅವರ ಬದಲು ಕಾರ್ಡ್ ಇಲ್ಲದ ೪೦ ಕ್ಕು ಮೇಲ್ಪಟ್ಟ ಜನ ಅಲ್ಲದೆ ೧೦ ನೇ ತರಗತಿ ಓದುವ ಲಾಲ್ ಸಾಬ್ ಎಂಬ ವಿದ್ಯಾರ್ಥಿ ಅಜ್ಜಿ ಸುಲ್ತಾನಬಿ ಬದಲು ಕೆಲಸಕ್ಕೆ ಬಂದಿದ್ದು ಇದರಂತೆ ಒಟ್ಟು ೧೨ ಮಕ್ಕಳು ನೆರೇಗಾ ಕೆಲಸ ಮಾಡುತ್ತಿದ್ದರು.
ಗೊರೆಬಾಳ ಗ್ರಾ.ಪ ಅಧ್ಯಕ್ಷರಾದ ಪಿ.ಪ್ರಮೀಳ, ಪಿ.ಡಿ.ಓ ವನಜಾಕ್ಷಿ ಹಾಗು ಸಿಬ್ಬಂದಿಗಳು ಸಾರ್ವಜನಿಕ ಮಹಿತಿ ಮೇರುಗೆ ಭೀಮರಾಜ್ ಕ್ಯಾಂಪ್ ಕೆಲಸ ನಡೆಯುವ ಸ್ಥಳಕ್ಕೆ ಹೋಗಿ ಜಾಬ್ ಕಾರ್ಡ ಇಲ್ಲದೆ ಹಾಗು ಶಾಲಾ ಮಕ್ಕಳು ಕೆಲಸದಲ್ಲಿ ತೊಡಗಿದನ್ನು ಕಂಡು ಏನಾದರು ತೊಂದರೆ ಯಾದರೆ ಯಾರು ಹೊಣೆ ಎಂದು ಮೇಟಿಗಳನ್ನು ತರಾಟೆಗೆ ತಗೆದು ಕೊಂಡು ಜಾಬ್ ಕಾರ್ಡ್ ಇಲ್ಲದವರು, ಶಾಲಾ ಮಕ್ಕಳನ್ನು ಮನೆಗೆ ಹೋಗಿ ಎಂದಾಗ ಕೂಲಿ ಕಾರ್ಮಿಕರು ಹಾಗೂ ಅಧಿಕಾರಿಗಳು, ಅಧ್ಯಕ್ಷರ ಮಧ್ಯೆ ಗಲಾಟೆ ನಡೆಯುತು.
ಇನ್ನು ಮುಂದೆ ಕೂಲಿ ಕಾರ್ಮಿಕರು ಕೊರೊನಾ ಪರೀಕ್ಷೆ ಮಾಡಿಸಿ ಕೊಂಡು ನೆಗೆಟಿವ್ ಬಂದವರು ಕೆಲಸಕ್ಕೆ ಬಂದು ಸಮಾಜಿಕ ಅಂತಲ ಕಪಾಡಿ ಮಾಸ್ಕ್ ಧರಿಸಿ ಕೆಲಸ ಮಾಡಬೇಕು ಇಲ್ಲದಿದ್ದರೆ ಕೆಲಸಕ್ಕೆ ಬರಬೇಡಿ ಶಾಲಾ ಮಕ್ಕಳನ್ನು ಕೆಲಸಕ್ಕೆ ಕರೆದು ಕೊಂಡು ಬಂದ ಮೇಟಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿ.ಪ್ರಮೀಳ ,ಪಿ.ಡಿ.ಓ ವನಜಾಕ್ಷಿ ಮೇಟಿಗಳನ್ನು ತರಾಟೆಗೆ ತಗೆದುಕೊಂಡಾಗ ಗಲಾಟೆ ನಡೆದು ಕೆಲಸ ಮಾಡದೆ ಕೂಲಿ ಕಾರ್ಮಿಕರು ತಮ್ಮ ಮನೆಗೆ ಹೊರಟು ಹೋದರು.