ಉದ್ಯೋಗ ಖಾತ್ರಿ: 200 ದಿನಕ್ಕೆ ಹೆಚ್ಚಿಸಲು ಮಾನವ ಸರಪಳಿ


ರಾಯಚೂರು.ನ.03- ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 200 ದಿನಗಳ ಉದ್ಯೋಗ ಮತ್ತು 5 ಕೆಜಿ ಆಹಾರಧಾನ್ಯವನ್ನು 6 ತಿಂಗಳವರೆಗೆ ನೀಡುವಂತೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯನ್ನು ಮಾಡುತ್ತ ಲಾಕ್ ಡೌನ್ ಮತ್ತು ಕೋವಿಡ್ 19 ಸಂಕ್ರಮಿಕ ರೋಗದ ಕಾರಣಕ್ಕೆ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ತಮ್ಮ ಗ್ರಾಮಗಳಿಗೆ ಮರಳಿ ಬಂದಿದ್ದಾರೆ, ಸಾವಿರಾರು ಕುಟುಂಬಗಳು ಈಗಾಗಲೇ 100 ದಿನಗಳನ್ನು ಮುಗಿಸಿದ್ದು ಮರುಬಳಕೆ ಬಂದ ಕುಟುಂಬದ ಸದಸ್ಯರು ಸೇರಿದಂತೆ ಈಗ ಯಾವುದೇ ಉದ್ಯೋಗವಿಲ್ಲದೆ ಆಹಾರಧಾನ್ಯದ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿದ್ದಾರೆ.
ಇದರೊಂದಿಗೆ ಅತಿವೃಷ್ಟಿ ,ಪ್ರವಾಹವು ಇವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ,ಆದಕಾರಣ ಕೊಡಲೇ ಉದ್ಯೋಗ ಖಾತ್ರಿ ಕಾನೂನಿನಡಿಯಲ್ಲಿ ಮಾನವ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ ಮುಂದಿನ 6 ತಿಂಗಳವರೆಗೆ ಪಡಿತರ ಚೀಟಿಯಲ್ಲಿ ಪ್ರತಿ ಕುಟುಂಬಕ್ಕೆ 5 ಕೆಜಿ ಆಹಾರಧಾನ್ಯವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಭಯ್, ರೇಣುಕಮ್ಮ, ಬಸವರಾಜ,ಲತಾ,ಬಸ್ಸಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.