ಉದ್ಯೋಗ ಖಾತ್ರಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಸಲಹೆ

ಆಳಂದ: ಮೇ.24:ಖಜೂರಿ ಗ್ರಾಮ ಪಂಚಾಯತ ವತಿಯಿಂದ ಖಜೂರಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಅಡಿಯಲ್ಲಿ ಕೆರೆ ಹುಳುಎತ್ತಿರುವ ಸ್ಥಳದಲ್ಲಿ ಇಓ ಅವರು ಕೂಲಿ ಕಾರ್ಮಿಕರೊಂದಿಗೆ ರೋಜಗಾರ ದಿನಾಚರಣೆಯನ್ನು ಆಚರಿಸಿದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ ಮಾತನಾಡಿ ಭೀಕರ ಬರಗಾಲ ಉಂಟಾಗಿದ್ದು, ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭಣಿಸಿದೆ, ಅದನ್ನು ತಪ್ಪಿಸಲು ಸಸಿಗಳನ್ನು ನೆಡುವುದು , ನೀರು ಸಂಗ್ರಹಣೆ ಮಾಡುವ ಮೂಲಕ ಜಲಾಮೃತ ಕಾಮಗಾರಿಗೆ ಆಧ್ಯತೆ ನೀಡಬೇಕು ಎಂದು ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ಹೇಳಿದರು.
ಕೂಲಿ ಕಾರ್ಮಿಕರು ವಲಸೆ ಹೋಗುವುದನ್ನು ತಡೆಗಟ್ಟಲು ಮಾನವ ದಿನ ದಿನಗಳ ಸೃಜನೆ ಮಾಡಲು ಖಾತ್ರಿ ಯೋಜನೆ ವರದಾನವಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮ ಅಭಿವೃದ್ಧಿಗೆ ಕೈ ಜೋಡಿಸಬೇಕು, ಕಾರ್ಮಿಕರಿಗೆ ಕೆಲಸ ನೀಡುವ ಜವಾಬ್ದಾರಿ ಗ್ರಾಮ ಪಂಚಾಯತಿ ಮೇಲಿದೆ ಎಂದು ಅವರು ಹೇಳಿದರು.
ಒಟ್ಟು 600 ಕೂಲಿ ಕಾರ್ಮಿಕರಲ್ಲಿ 292 ಜನ ಮಾತ್ರ ಪುರುಷ ಮತ್ತು ಮಹಿಳೆಯರು ಕೂಲಿ ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿ ಕೆಲಸಕ್ಕೆ ಬಂದಿದ್ದರೂ. ಸ್ಥಳದಲ್ಲಿ ಇದ್ದ ಕಾರ್ಯದರ್ಶಿ ಜಯಪ್ರಕಾಶ ಅವರಿಗೆ ಗೈರು ಆದ ಕೂಲಿ ಕಾರ್ಮಿಕರಿಗೆ ತಿಳುವಳಿಕೆ ಹೇಳಿಕೆ ಕೆಲಸಕ್ಕೆ ಬರುವಂತೆ ನೋಡಿಕೊಳ್ಳುವಂತೆ ಎಚ್ಚರಿಸಿದರು ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೈಯಕ್ತಿಕ, ಸಮುದಾಯ ಕಾಮಗಾರಿಗಳಾದ ತೋಟಗಾರಿಕೆ ಇಲಾಖೆ, ರೇμÉ್ಮ ಇಲಾಖೆ, ಅರಣ್ಯ ಇಲಾಖೆ, ಕೃಷಿ ಅರಣ್ಯ ಕಾಮಗಾರಿಗಳು, ಕೃಷಿ ಹೊಂಡ, ಇಂಗು ಗುಂಡಿ, ಕೊಳುವೆ ಬಾವಿ ಮರಪೂರಣ ಘಟಕ, ಭೂ ಅಭಿವೃದ್ಧಿ, ಗ್ರಾಮೀಣ ಗೋದಾಮು, ಬೋಲ್ಡರ್ ಚೆಕ್ ಡ್ಯಾಂಗಳು, ಜಮೀನು ಸುತ್ತಲು ತೋಟಗಾರಿಕಾ ಸಸಿಗಳ ನಡುವುದು ಮತ್ತು ಕೆರೆ ಹೂಳೆತ್ತುವುದು, ಗೋ ಕಟ್ಟೆ ನಿರ್ಮಾಣ, ಹೊಸ ಕೆರೆ ನಿರ್ಮಾಣ, ಮಣ್ಣುಗಾಲುವೆ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಸರಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ಧಿ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಅಂಗನವಾಡಿ ಕಟ್ಟಡಗಳು ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು.
ಡಿಇಓ ಯುವರಾಜ ಕಾರಭಾರಿ, ಬಿಎಫ್‍ಟಿ ಸುಧಾಕರ ಜಮಾದಾರ, ಟಿಐಎಫ್‍ಸಿ ಸಂಜುಕುಮಾರ ಸಂಗೋಳಗಿ ಇದ್ದರು.