ಉದ್ಯೋಗ ಖಾತ್ರಿ ಯೋಜನೆ ಬಡವರಬಂಧು

ಚಂಡರಕಿ:ಜ.25:ಗುರುಮಠಕಲ ತಾಲೂಕ ನಮ್ಮ ಭಾಗದಲ್ಲಿ ಬಹಳಷ್ಟು ರೈತ ಜನರು ಒಕ್ಕಲುತನವನ್ನು ಅವಲಂಬಿಸಿದ್ದು. ಸಣ್ಣ ರೈತರಾದ ತಾವು ತಮ್ಮ ಹೊಲದಲ್ಲಿ ಕೆಲಸ ಇರಲಾರದ ಸಮಯದಲ್ಲಿ. ತಾವು ತಮ್ಮ ದಿನ ನಿತ್ಯದ ಸಣ್ಣ ಪುಟ್ಟ ಖರ್ಚು ಗಳಿಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಾವು ಹದಿನೆಂಟು ವರ್ಷಗಳ ಮೇಲ್ಪಟ್ಟವರು ಹೆಸರು ನಮೂದಿಸಿ ಕೊಂಡವರು ನಿಮಗೆ ಕೆಲಸ ನೀಡುತ್ತಿದೆ ಇದನ್ನು ಸರಿಯಾಗಿ ಬಳಸಿಕೊಳ್ಳಿರಿ ಎಂದು ಚೆಪೆಟ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ತಿಳಿಸಿದರು. ಶ್ರೀ ದೇವಿ ಮಾಶಮ್ಮ ಬೆಟ್ಟದ ಮೇಲೆ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಡೆಯು ಕೆಲಸದಲ್ಲಿ ಸುಮಾರು ಎರಡು ನೂರು ಜನ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಇವರು ಈ ಯೋಜನೆಯು ಆಪತ್ಕಾಲದಲ್ಲಿ ಬಡವರ ಬಂದುವಾಗಿ ನಮ್ಮನ್ನು ಕೈಹಿಡಿದು ಮುನ್ನಡೆಸುವ ಉತ್ತಮ ಯೋಜನೆ ಎಂದರು. ಇದು ಅಲ್ಲದೆ ಕೆಲಸ ಮಾಡುವ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಅಪಾಯಕ್ಕೆ ಒಳಪಟ್ಟಲ್ಲಿ ಸಿಗುವಂತಹ ವಿಮಾ ಸೌಲಭ್ಯಗಳನ್ನು ಕೂಲಿ ಕಾರ್ಮಿಕರಿಗೆ ಬಿಡಿ ಬಿಡಿಸಿ ಅವರ ಮನಮುಟ್ಟುವಂತೆ ತಿಳಿಸಿ ಹೇಳಿದರು ಮತ್ತು ಬೆವರು ಸುರಿಸಿ ಕಷ್ಟ ಪಟ್ಟು ಕೆಲಸ ಮಾಡುವ ಕೂಲಿಕಾರರಿಗೆ ಯಾವುದೇ ತರಹದ ತೊಂದರೆಗಳು ಬರದಂತೆ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅವರ ದಿನ ನಿತ್ಯದ ಹಾಜರಾತಿಯನ್ನು ನೋಡಿಕೊಳ್ಳಲು ಉತ್ತಮ ವ್ಯಕ್ತಿಗಳನ್ನು ಹಾರಿಸಿ ಅವರಿಗೆ ಮೇಟಿ ಗಳು ಎಂದು ನೇಮಿಸಿ ಗುಂಪು ಗುಂಪುಗಳಾಗಿ ವಿಂಗಡಿಸಿ ಪ್ರತಿ ದಿನ ನಿಮಗೆ ಬರುವ ಕೂಲಿ 316 ರೂಪಾಯಿ ಸರ್ಕಾರವು ನೀಡುತ್ತಿದ್ದು ಒಂದು ಕುಟುಂಬದಲ್ಲಿ ಒಬ್ಬರಿಗೆ 100 ದಿನಗಳು ನಿವು ಕೆಲಸ ಮಾಡಬಹುದು. ದಿನಗಳು ಸರಿಯಾದ ಸಮಯದಲ್ಲಿ ಅಂದರೆ ನಿಮ್ಮ ಹೊಲದಲ್ಲಿ ಕೆಲಸ ಇರಲಾರದ ಸಮಯದಲ್ಲಿ ಇಂತಹ ದಿನಗಳು ಬಳಕೆ ಮಾಡಿಕೊಂಡಲ್ಲಿ ನಿಮ್ಮ ಸಂಸಾರದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ವಾಗುತ್ತದೆ ಎಂದು ಹೇಳಿದರು. ಈ ವೇಳೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಯವರಾದ ಬಸವರಾಜ. ಶರಣಪ್ಪ. ಭೀಮರಾಯ ಹಾಗೂ ಕೂಲಿ ಕಾರ್ಮಿಕರು ಇದ್ದರು.