ಉದ್ಯೋಗ ಖಾತ್ರಿ ಯೋಜನೆ : ಕೂಲಿ ಕಾರ್ಮಿಕರಿಗೆ ಶರ್ಟ್,ಕ್ಯಾಪ್ ವಿತರಣೆ

ಅರಕೇರಾ,ಜು,೨೧- ಗ್ರಾಮೀಣ ಭಾಗದ ಬಡ ಜನರು ದೂರದ ನಗರ ಪ್ರದೇಶಕ್ಕೆ ಗೂಳೆ ಹೋಗುವುದನ್ನು ತಪ್ಪಿಸುವುದಕ್ಕೆ ಗ್ರಾ.ಪಂ.ನಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಮಲ್ಲಯ್ಯ ಪೂಜಾರಿ ಹೇಳಿದರು.
ದೇವದುರ್ಗ ತಾಲ್ಲೂಕಿನ ಬಿ.ಗಣೇಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ೧೦೦ ದಿನಗಳಿಗಿಂತ ಅಧಿಕ ಮಾನವ ದಿನ ಸೃಜನ ಮಾಡಿದ ಕುಟುಂಬಗಳಿಗೆ ಆಯೋಜಿಸಲಾಗಿದ್ದ ಶರ್ಟ್ ಮತ್ತು ಕ್ಯಾಪ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡಜನರು ತಮ್ಮ ಕುಟುಂಬಗಳನ್ನು ಬಿಟ್ಟು ಪಟ್ಟಣ ಪ್ರದೇಶಗಳಿಗೆ ಬಿಟ್ಟುಹೋಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಮಹತ್ತರ ಯೋಜನೆಯನ್ನು ಜಾರಿಗೊಳಿಸಿದೆ. ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗವಿಲ್ಲದೇ ಪರದಾಡುತ್ತಿರುವವರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲಾಗುತ್ತಿದೆ. ಸುಮಾರು ೩ ಸಾವಿರಕ್ಕೂ ಅಧಿಕ ಫಲಾನುಭವಿಗಳು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸರ್ಕಾರ ಇನ್ನೂ ಅನೇಕ ಯೋಜನೆಗಳನ್ನು ತರುವ ಮೂಲಕ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಪ್ರೋತ್ಸಾಹಿಸುವ ಜತೆಗೆ ಆಸರೆಯಾಗಬೇಕಾದ ಕೆಲಸವಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಮಲ್ಲಯ್ಯ ಪೂಜಾರಿ, ಪಿಡಿಒ ಚನ್ನಪ್ಪ, ಗ್ರಾಪಂ ಉಪಾಧ್ಯಕ್ಷ ಹನುಮಂತ, ಗ್ರಾಪಂ ಸದಸ್ಯರಾದ ಹನುಮಂತ, ಹನುಮಂತಿ ಹನುಮಂತ್ರಾಯ ಮಕಾಶಿ ದೊರೆ, ನೀಲಮ್ಮ ಭಂಗಪ್ಪ, ಮಲ್ಲಮ್ಮ ಅಂಜಿನಯ್ಯ ದಳವಾಯಿ, ಕಾಯಕ ಬಂಧುಗಳಾದ ಮಲ್ಲಯ್ಯ ದಳವಾಯಿ, ಬಾಬೆ ಶಿವರಾಜ, ಅಂಜಿನಯ್ಯ ಇಳಿಗೇರಾ, ಸ್ವಾಮಿ ಮಂಡ್ಲಿ, ನಟರಾಜ ಸಮುದ್ರ, ಭೀಮಣ್ಣ ಸಮುದ್ರ, ಹನುಮಂತ್ರಾಯ ಮ್ಯಾಕಲ್, ಭಾಷಾ ಕುರ್ಲಾ ಇತರರಿದ್ದರು.