ಸಂಜೆವಾಣಿ ವಾರ್ತೆ
ಸಂಡೂರು :ನ: 26: ಹಳೆ ದರೋಜಿ ಕೂಲಿ ಕಾರ್ಮಿಕರಿಗೆ ಕೆಲಸದ ಅವಶ್ಯಕತೆ ಇದ್ದು ಮೂರು ತಿಂಗಳಿಂದಲೂ ಕೆಲಸವಿಲ್ಲದೆ ಬೇರೆ ಊರುಗಳಿಗೆ ಗೂಳೇ ಕೆಲಸ ಹೋಗುತ್ತಿದ್ದು ತಕ್ಷಣ ಉದ್ಯೋಗ ನೀಡುವ ಮೂಲಕ ಗುಳೇ ಹೋಗುವುದನ್ನು ತಪ್ಪಿಸಿ ಎಂದು ಕೂಲಿ ಕಾರ್ಮಿಕ ಸಂಘದ ಮುಖಂಡ ಕೆ.ವಾಣಿ ಮನವಿ ಮಾಡಿದರು.
ಅವರು ತಾಲೂಕಿನ ಹೊಸ ದರೋಜಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ( ಗ್ರಾಕೂಸ್) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ಮನವಿ ಪತ್ರಿಕೆ ನೀಡಿಕೆ ಸಂದರ್ಭದಲ್ಲಿ ಮಾತನಾಡಿ ಪಂಚಾಯಿತಿಯಲ್ಲಿ ತುಂಬಾ ಸಮಸ್ಯೆಗಳಾಗುತ್ತಿವೆ ದಯವಿಟ್ಟು ನಮಗೆ ನರೇಗಾ ದಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ನಮ್ಮ ಪಂಚಾಯಿತಿಯ ಕಾಯಕ ಬಂಧುಗಳಿಗೆ ನಾವು ಕೆಲಸ ಕೇಳಿದರೆ ಫಾರ್ಮ್ 6 ಅನ್ನು ಕೊಟ್ಟು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ತಂದಾಗ ಕಾಯಕ ಬಂದುಗಳೇ ನಮಗೆ ಕೆಲಸ ಬೇಡ ಭತ್ತ ಕೊಯ್ಯುವುದು ಇದೆ ಎಂದು ಹೇಳುತ್ತಿದ್ದಾರೆ. ಫಾರ್ಮ್ 6 ಅನ್ನು ಕೊಟ್ಟಿಲ್ಲ ಎಂದು ನೀವು ತಿಳಿಸಿದ್ದೀರಿ. ಆದಕಾರಣ ಕೂಲಿ ಕಾರ್ಮಿಕರಾದ ನಾವು ನಮಗೆ ಕೆಲಸದ ಅವಶ್ಯಕತೆ ಇದೆ ನಮಗೆ ದುಡಿಯುವ ಕೈಗಳಿಗೆ ದಯವಿಟ್ಟು ಕೆಲಸ ಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ, ಯಾವುದೇ ರೀತಿಯ ಬೇರೆ ಕಾರಣ ಹೇಳದೆ ಕೆಲಸ ಕೊಡಿ, ಈಗಾಗಲೇ ಮಂತ್ರಿಗಳು ಸಹ ಹೆಚ್ಚಿನ ದಿನಗಳ ಕೂಲಿ ದಿನಗಳನ್ನು ಕೊಡುತ್ತೇವೆ ಎಂದಿದ್ದಾರೆ ಅದ್ದರಿಂದ ಕೆಲಸ ಕೊಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕರಾದ ಹೆಚ್.ಯಲ್ಲಮ್ಮ, ಕೆ.ಮಹೇಶ್, ರಾಮಯ್ಯ, ಕೆ.ರೇಣುಕಾ, ಸಿ.ರಾಜಮ್ಮ ಇತರ ಹಲವಾರು ಕಾರ್ಮಿಕರು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಮಾಡಿದರು.
One attachment • Scanned by Gmail