ಉದ್ಯೋಗ ಖಾತ್ರಿ ಕೂಲಿ ಹಣ ಬಿಡುಗಡೆಗೆ ಆಗ್ರಹಿಸಿ ರ್ಯಾಲಿ

ಚಿಂಚೋಳಿ,ನ.10- ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೈಗೊಂಡ ಉದ್ಯೋಗ ಖಾತ್ರಿಯೋಜನೆಯಡಿ ಕೆಲಸಕ್ಕೆ ಓಒಖ ಜೀರೋ ಮಾಡಿ ಅಧಿಕಾರಿಗಳು, ಕೂಲಿ ಹಣ ಜಮಾ ಮಾಡದೆ ವಂಚಿಸಿರುವುದನ್ನು ಖಂಡಿಸಿ ಹಾಗೂ ಬಾಕಿ ಕೂಲಿ ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನಾ ಬೃಹತ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಯಿತು.
ಭಾರತ ಮುಕ್ತಿ ಮೋರ್ಚಾ ಸಂಘಟನೆಯ ನೇತೃತ್ವದಲ್ಲಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ವೃತ್ತದಿಂದ ತಹಸಿಲ್ ಕಾರ್ಯಾಲಯ ವರೆಗೂ ಪ್ರತಿಭಟನಾ ರ್ಯಾಲಿಯª ಮೂಲಕ ತರೆಳಿ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.
ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಮುಕ್ತಿ ಮೋರ್ಚಾ ಮುಖಂಡರಾದ ಮಾರುತಿ ಗಂಜಗಿರಿ ಅವರು, ತಾಲೂಕಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಧೋಟಿಕೋಳ ಮತ್ತು ತಾಜಾಲಾಪೂರ ಗ್ರಾಮಗಳಲ್ಲಿ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಮಾಡಿದ ಕೆಲಸ ಓಒಖ ಜೀರೋ ಮಾಡಿ ಅಧಿಕಾರಿಗಳು ಹಣ ಜಮಾ ಮಾಡದೆ ವಂಚಿಸಿದ್ದಾರೆಂದು ಅರೋಪಿಸಿದರು.
ಕೂಡಲೇ ಕೂಲಿ ಕಾರ್ಮಿಕರು ಬಾಕಿ ವೇತನ ಬಿಡುಗಡೆ ಮಾಡಬೇಕು, ಕಾರ್ಮಿಕರಿಗೆ ಕೆಲಸ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ವಿಲಾಸ ಗೌತಮ ನಿಡಗುಂದ. ಉಮೇಶ ಧೋಟಿಕೋಳ. ಕಾಶಿರಾಮ ದೇಗಲಮಡಿ. ಶ್ಯಾಮಸುಂದರ ತಾಜಾಲಾಪೂರ. ರಾಜು ಕುಮಾರ ಧೋಟಿಕೋಳ. ನಿರ್ಮಲ ಹಸರಗುಂಡಗಿ. ಶ್ರೀಕಾಂತ ಕನಕಪುರ. ಅಭಿಲಾಶ ರುಸ್ತಪೂರ. ಕೃಷ್ಣ ದೇಗಲಮಡಿ. ನಂದಕುಮಾರ ಭಕ್ತಂಪಲ್ಲಿ. ಗೋಪಾಲ ಗಾರಂಪಳ್ಳಿ. ಮೌನೇಶ ಗಾರಂಪಳ್ಳಿ. ಮತ್ತು ಧೋಟಿಕೋಳ ಹಾಗೂ ತಾಜಾಲಾಪೂರ ಗ್ರಾಮಸ್ಥರು ಭಾಗವಹಿಸಿದ್ದರು.