ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ಕೊಡಿ- ಕಾಲೂಬ್

ಸಂಡೂರುಬ್ಮಾ:26: ಪ್ರತಿ ಬಾರಿಯೂ ಸಹ ಹೋರಾಟದ ಮೂಲಕವೇ ಉದ್ಯೋಗ ಖಾತ್ರಿಯ ಅಡಿಯಲ್ಲಿ ಉದ್ಯೋಗ ಪಡೆಯುವಂತಹ ಸ್ಥಿತಿ ಉಂಟಾಗಿದೆ, ಪ್ರಥಮ ಹಂತದಲ್ಲಿ 200 ಜನರಿಗೆ ಉದ್ಯೋಗ ನೀಡಿದ್ದರು, ಅದರೆ ಈಗ ಕೇವಲ 36 ಜನರಿಗೆ ಮಾತ್ರ ಕೆಲಸ ನೀಡಿದ್ದು ಉಳಿದವರು ಕೆಲಸವಿಲ್ಲದಂತಾಗಿದ್ದಾರೆ ಅದ್ದರಿಂದ ತಕ್ಷಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚು ಜನರಿಗೆ ಕೆಲಸ ನೀಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಡಿ.ವೈ.ಎಫ್.ಐ. (ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್)ಅಧ್ಯಕ್ಷ ಕಾಲೂಬ್ ಒತ್ತಾಯಿಸಿದರು.
ಅವರು ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ವಿವಿಧ ಕಾರ್ಮಿಕರ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರ ಜನರಿಗೆ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಭದ್ರತೆಯನ್ನು ಕೊಡುವಂತಹ ಮಹತ್ತರ ಯೋಜನೆಯನ್ನು ಜಾರಿಗೆ ತಂದಿರುವ ಯೋಜನೆಯೇ ಉದ್ಯೋಗ ಖಾತ್ರಿ ಅದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಯಂತ್ರಗಳಿಂದ ಕೆಲಸಗಳನ್ನು ಮಾಡಿಸಿಕೊಂಡು ಸಾರ್ವಜನಿಕರಿಗೆ ಉದ್ಯೋಗ ಇಲ್ಲದಂತೆ ಮಾಡಲಾಗುತ್ತಿದೆ ಅದ್ದರಿಂದ ಕಡ್ಡಾಯವಾಗಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಕೊಡಬೇಕು, ಅಲ್ಲದೆ ವರ್ಷದಲ್ಲಿ 200 ದಿನಗಳಾದರೂ ಕೆಲಸ ನೀಡಿದರೆ ಬಡ ಕಾರ್ಮಿಕರ ಕುಟುಂಬಗಳು ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ, ಸರ್ಕಾರದ 32ಕ್ಕೂ ಹೆಚ್ಚು ಇಲಾಖೆಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದು ಅದರೆ ಅ ಕಾರ್ಯಮಾತ್ರ ಅಗುತ್ತಿಲ್ಲ ಅದ್ದರಿಂದ ತಕ್ಷಣ ಯೋಜನೆಯ ಪೂರ್ಣ ಅನುಷ್ಠಾನ ಗೊಳಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಕೊಡಿ ಎಂದು ಒತ್ತಾಯಿಸಿದರು.
ಕಾರ್ಮಿಕ ಸಂಘಟನೆ, ರೈತ ಸಂಘಟನೆ, ಹಾಗೂ ಡಿ.ವೈ.ಎಫ್.ಐ ಅಡಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಸ್ವಾಮಿ, ನಾಗಭೂಷಣ, ಈರಣ್ಣ, ಶಿವರಡ್ಡಿ ವೆಬಾಕುಮಾರಿ,