ಉದ್ಯೋಗ ಖಾತ್ರಿಯಡಿ 200 ದಿನ ಕೆಲಸ ನೀಡಲು ಆಗ್ರಹ

ವಾಡಿ: ಜೂ.2:ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದತಿ ಮಾಡಬೇಕು. ಮಹಾಮಾರಿ ಕೊರೋನಾ ತೊಲಗಿಸಲು ಸಾರ್ವತ್ರಿಕವಾಗಿ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟಿಸಲಾಯಿತು.

ಇಂಗಳಗಿ ಗ್ರಾಮದಲ್ಲಿ ಸಂಘಟನೆಯÀ ತಾಲ್ಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ ನೇತೃತ್ವದಲ್ಲಿ ವಹಿಸಿ ಮಾತನಾಡುತ್ತಾ, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ವರ್ಷದಲ್ಲಿ 200 ಮಾನವ ದಿನಗಳ ಉದ್ಯೋಗ ನೀಡಬೇಕು. ಎಲ್ಲರಿಗೂ ಅನ್ನ ನೀಡುವ ಅನ್ನದಾತನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಲಾಗಿದ್ದಾನೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಕೆಲಸ ಸಿಗದೆ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.

ಆದರೆ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿü ಕಾನೂನುಗಳಿಂದ ಕಾರ್ಮಿಕರಿಗೆ ಇನ್ನಷ್ಟೂ ಕಂಟಕವಾಗಿವೆ ಎಂದು ಗುಡುಬಾ ಆರೋಪಿಸಿದರು.

ಪ್ರತಿ ಹಳ್ಳಿ, ನಗರ ಪ್ರದೇಶದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯುವ ಸಲುವಾಗಿ ಜನರ ಸರತಿ ಸಾಲು ಎಲ್ಲಡೇ ಕಂಡು ಬರುವ ದೃಶ್ಯ ಸಾಮಾನ್ಯವಾಗಿದೆ. ಆದರೂ ಕೇಂದ್ರ ಸರಕಾರ ಉಚಿತ ಲಸಿಕೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೋವಿಡ್ ಎರಡನೇ ಅಲೆಯಿಂದ ದೇಶದಲ್ಲೇಡೆ ಜನರು ಪರದಾಡುವಂತಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಉಚಿತ ಪಡಿತರ ಆಹಾರ ಧಾನ್ಯ ವಿತರಣೆ ಮಾಡಬೇಕು ಎಂದು ಕೆಪಿಆರ್‍ಎಸ್ ಮುಖಂಡರು ಸರಕಾರಕ್ಕೆ ಆಗ್ರಹಿಸಿದರು.

ಇಂಗಳಗಿ ಕಾರ್ಯದರ್ಶಿ ಶಕುಂತಲಾ ಪವಾರ್, ಅಧ್ಯಕ್ಷ ಭಾಗಮ್ಮ, ಮುಬಾರಕ್, ಗಿಡ್ಡಮ್ಮ ಪವಾರ್, ಶಿಲ್ಪಾ, ನಾಗಮ್ಮ ಪೂಜಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.