ಉದ್ಯೋಗ ಖಾತ್ರಿಯಡಿ ಬದುವು ನಿರ್ಮಾಣ.


ಕೂಡ್ಲಿಗಿ. ಮೇ.17 :- ತಾಲೂಕಿನ ಕಕ್ಕುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿ   ಸೂರವ್ವ ನಹಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರು ಹೊಲಗಳಿಗೆ  ಬದುವು ನಿರ್ಮಾಣ ಕಾರ್ಯದಲ್ಲಿ  ತೊಡಗಿದ್ದರು.
ಉದ್ಯೋಗ ಖಾತ್ರಿಯ  ಕೃಷಿ ಇಲಾಖೆ ಅನುಷ್ಠಾನ ಯೋಜನೆಯಡಿಯಲ್ಲಿ  ಅಡವಿ ಸೂರವ್ವನಹಳ್ಳಿ ಗ್ರಾಮದ ನರೇಗಾದ ಅನೇಕ  ಕೂಲಿ ಕಾರ್ಮಿಕರು, ಕೃಷಿ ಇಲಾಖೆಯ ಸಹ ನಿರ್ದೇಶಕರಾದ ಗುರುಬಸವರಾಜ್ ಚಿಲಗೌಡ ಹಾಗೂ ತಾಂತ್ರಿಕ ಸಹಾಯಕರಾದ ಆನಂದ ನಾಯಕ, ಮೇಟಿ ಅಂಜಿನಪ್ಪ ಬನ್ನಿ  ಇವರುಗಳ ನೇತೃತ್ವದಲ್ಲಿ ಹೊಲಗಳ  ಬದುವು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.