ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ಒತ್ತಾಯ

ಗಂಗಾವತಿ, ನ.05: ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗ ನೀಡದ ಕ್ರಮ ಖಂಡಿಸಿ ನಗರದ ತಾಲೂಕು ಪಂಚಾಯತಿ ಕಚೇರಿ ಮುಂದೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಸಂಘದ ತಾಲೂಕು ಸಮಿತಿಯು ಬುಧವಾರ ಅಹೋರಾತ್ರಿ ಧರಣಿ ನಡೆಸಿತು.
ಗಂಗಾವತಿ ತಾಪಂ ಕಚೇರಿ ಮುಂದೆ ಅ.19,2020 ರಂದು ಪ್ರತಿಭಟನೆ ಮಾಡಲಾಗಿತ್ತು. ಅಂದು ಎ.ಡಿ.ಸಾಹೇಬರು ಮತ್ತು ತಾಪಂ ವ್ಯವಸ್ಥಾಪಕರು ವಾರದೊಳಗೆ ಕೆಲಸ ಕೊಡುವ ಭರವಸೆ ನೀಡಿದ್ದರು. ಆದರೇ, ಇಲ್ಲಿಯವರೆಗೆ ಯಾವುದೇ ಕೆಲಸ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಕಾರ್ಮಿಕರಿಗೆ ಒಂದು ದಿನಕ್ಕೆ 275 ರೂ.ನೀಡಬೇಕು. ಮೇಜರ್ ಮೆಂಟ್ ಬಂದಿಲ್ಲ ಎಂದು ಹೇಳಿ ತಾಪಂ ಜೆಇ ಗಳು ಯಾವುದೇ ಕಾರಣಕ್ಕೂ ದುಡಿದ ಕೂಲಿಯನ್ನು ಕಡಿಮೆ ಮಾಡಬಾರದು. ಟ್ರಾಕ್ಟರ್ ಸೇರಿ ಇನ್ನಿತರ ವಾಹನಗಳ ಜವಾಬ್ದಾರಿ ತಾವುಗಳೆ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಬಳಿಕ ತಾಪಂ ಇಒ ಡಾ.ಮೋಹನ್ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಪಂ ಕಚೇರಿ ಒಳಗೆ ಊಟದ ಸಿದ್ಧತೆ ಮಾಡಿ ವಿನೂತನ ಧರಣಿ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷ ಎಸ್.ಕನಕರಾಯ, ಕಾರ್ಯದರ್ಶಿ ಶೇಕಮ್ಮ, ಎ.ಎಲ್.ತಿಮ್ಮಣ, ಎಸ್.ಕನಕರಾಯ, ಮತ್ತಣ್ಣ, ಶೇಖಮ್ಮ, ಗಂಗಮ್ಮ, ಶಿವಮ್ಮ, ನೀಲಪ್ಪ, ನಿಂಗಪ್ಪ, ಎ.ಹುಲಗಪ್ಪ ಸೇರಿ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.