ಉದ್ಯೋಗ ಖಾತರಿ ಯೋಜನೆ ಸದುಪಯೋಗ ಪಡೆದುಕೊಳ್ಳಲು ಕರೆ

ರಾಯಚೂರು.ಅ.೨೧- ಉದ್ಯೋಗ ಖಾತ್ರಿ ಯೋಜನೆಯ ಕುರಿತು ಡಿ – ೨೦೨೩ ರ ವರೆಗೆ ತಮ್ಮ ಗ್ರಾಮ ಪಂಚಾಯತಿಯಲ್ಲಿ ಕಾಮಗಾರಿ ಬೇಡಿಕೆ ಪಟ್ಟಿ ಇದ್ದು, ಈ ಬೇಡಿಕೆ ಪಟ್ಟಿಯಲ್ಲಿ ವೈಯುಕ್ತಿಕ ಕಾಮಗಾರಿ ಬೇಡಿಕೆ ಸಲ್ಲಿಸಬಹುದು ಎಂಬ ಮಾಹಿತಿ ನೀಡಿದರು. ಜೊತೆಗೆ ಯೋಜನೆಯ ಸದುಪಯೋಗ ಪಡೆಯಲು ರೈತರಿಗೆ ಐಇಸಿ ಸಂಯೋಜಕರಾದ ಈರೇಶ ಅವರು ಹೇಳಿದರು.
ಅವರು ಅ.೨೦ ರ (ಶುಕ್ರವಾರ)ದಂದು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಸುಂಕೇಶ್ವರ ಗ್ರಾ.ಪಂ ವತಿಯಿಂದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ ಕಾರ್ಯಕ್ರಮವನ್ನು ಮಾಡಲಾಯಿತು. ಈ ವೇಳೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪೀರ ಸಾಬ್ ರೈತರರವರಿಂದ ಚಾಲನೆ ನೀಡಿ ಮಾತನಾಡಿದರು.
ಇದೇವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು. ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿವತಿಯಿಂದ ಪಡೆಯಬಹುದಾದ ಕಾಮಗರಿಗಳಾದ ಧನದ ಕೊಟ್ಟಿಗೆ, ಕುರಿ/ ಮೇಕೆ ಕೊಟ್ಡಿಗೆ, ಬಚ್ವಲ ಗುಂಡಿ, ಕೋಳಿ ಶೆಡ್ಡು, ಮೀನು ಕೃಷಿ ಕೋಳ, ಕೊಳವೆ ಮರು ಪೂರ್ಣ ಘಟಕ, ಬದು ನಿರ್ಮಾಣ, ಹಂದಿ ಕೊಟ್ಟಿಗೆ, ಅದೇ ರೀತಿಯಾಗಿ ತೋಟಗಾರಿಕೆ ಇಲಾಖೆಯಿಂದ ಮಾವು, ಮೊಸಂಬಿ, ಮಲ್ಲಿಗೆ ಹೂ, ನುಗ್ಗೆ, ದಾಳಿಂಬೆ, ಸೀಬೆ, ಕರಿಬೇವು ನಂತರ ಅರಣ್ಯ ಇಲಾಖೆಯಿಂದ ಹೊಂಗೆ, ಹೆಬ್ಬೇವು, ಸಾಗವನಿ, ಶ್ರೀಗಂಧ ಅದೇ ರೀತಿಯಲ್ಲಿ ರೇ? ಇಲಾಖೆಯಿಂದ ಹಿಪ್ಪು ನೇರಳೆ ನರ್ಸರಿ ಅಭಿವೃದ್ಧಿ, ಹಿಪ್ಪ ನೇರಳೆ ತೋಟ ಸ್ದಾಪನೆ ಈ ರೀತಿ ಕಾಮಗಾರಿ ಪಡೆಯಬಹುದು ಎಂದು ಸಭೆಯಲ್ಲಿ ತಿಳಿಸಿದರು.
ಕಾಮಗಾರಿ ಪೆಟ್ಟಗೆಗೆ ಪೀರ ಸಾಬ್ ರೈತರ ಮೂಲಕ ವೈಯಕ್ತಿಕ ಕಾಮಗಾರಿ ಪಟ್ಡಿಗೆ ತಮ್ಮ ವೈಯಕ್ತಿಕ ಕಾಮಗಾರಿಯನ್ನು ಫಾರಂ ಭರ್ತಿ ಮಾಡಿ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮನೆಮನೆಗೆ ಭೇಟಿ ನೀಡಿ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು. ಕರ ಪತ್ರ ಹಂಚಲಾಯಿತು.
ಈ ಸಂದರ್ಭದಲ್ಲಿ ಮಹ್ಮದ ರಫೀ ಬಿಎಪ್ಟಿ, ತಾಂಡ ರೋಜಗಾರ ಮಿತ್ರ, ಗ್ರಾ.ಪಂ. ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ರೈತರು ಹಾಜರಿದ್ದರು.