ಉದ್ಯೋಗ ಖಾತರಿ ಕೂಲಿ ಕಾರ್ಮಿಕರ ಆರೋಗ್ಯ ಶಿಬಿರಕ್ಕೆ ಚಾಲನೆ

ಸೇಡಂ,ಮೇ,25: ತಾಲೂಕಿನ ಗಡಿ ಗ್ರಾಮವಾದ ರಿಬ್ಬನ್ ಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಅಮೃತ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ್ ಮತ್ತು (ಕೆಎಹ್ ಪಿ ಟಿ) ಸಹಯೋಗದೊಂದಿಗೆ ಆರೋಗ್ಯ ಇಲಾಖೆ ವತಿಯಿಂದ ಉದ್ಯೋಗ ಖಾತರಿ ಯೋಜನೆ ಅಡಿ ನಾಲ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಅಮೃತ ಯೋಜನೆ ಅಡಿಯಲ್ಲಿ ಆರೋಗ್ಯ ಶಿಬಿರಕ್ಕೆ ತಾಪಂ ನರೇಗಾ ಸಹಾಯಕ ನಿರ್ದೇಶಕರಾದ ಅನಿಲಕುಮಾರ ಮಾನ್ಪಡೆ ರವರು ಚಾಲನೆ ನೀಡಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಖಂಡೇರಾಯಪಲ್ಲಿಯ ಆಡಳಿತ ವೈದ್ಯ ಅಧಿಕಾರಿಗಳಾದ ಶ್ರೀ ಸಿದ್ದು ಪಾಟೀಲ್ ರವರು ಮಾತನಾಡಿ ಆರೋಗ್ಯ ಬಗ್ಗೆ ಕೂಲಿ ಕಾರ್ಮಿಕರಿಗೆ ತಿಳಿಸಿದರು. ಆರೋಗ್ಯ ಶಿಬಿರದಲ್ಲಿ ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್ ಇತರ ರೋಗಗಳ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಅಂಬರೀಶ್,ನಾಗಮಣಿ, ಬಸವರಾಜ್, ಸಂಗೀತ ರವರು ಪರೀಕ್ಷಿಸಿದರು.(ಕೆಎಹ್ ಪಿ ಟಿ) ತಾಲೂಕ ಸಂಯೋಜಕರಾದ ಶ್ರೀ ಶರಣು ಕಟ್ಟಿಮನಿ, (ಐಇಸಿ) ಸಂಯೋಜಕರಾದ ಸಂತೋಷ್ ಪಾಟೀಲ್, ಎನ್ ಆರ್.ಎಲ್, ಎಮ್ ನ ಚೆನ್ನಯ್ಯ ಸ್ವಾಮಿ, ವಿಜಯಕುಮಾರ, ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಹರ್ಷವರ್ಧನ ರೆಡ್ಡಿ, ಸದಸ್ಯರ
ಚಿರಂಜೀವಿ, ಬಿಲ್ ಕಲೆಕ್ಟರ್, ರಾಜು, ಕಾಯಕು ಬಂಧುಗಳಾದ ನರಸಿಂಹ ರೆಡ್ಡಿ, ಹನುಮಂತು, ಸಾಯಿಲು ಇತರರು ಉಪಸ್ಥಿತರಿದ್ದರು.