ಉದ್ಯೋಗ ಕೌಶಲ್ಯಗಳನ್ನು ಅರಿತು ತಯಾರಾಗಿ 

 *ರಾಣೆಬೆನ್ನೂರು.ನ.೨೧ : ಉದ್ಯೋಗ ಮಾರುಕಟ್ಟೆ ಬಯಸಿದ್ದನ್ನು ತಿಳಿದುಕೊಳ್ಳಬೇಕು ತಿಳಿದುಕೊಂಡು ಅವರು ಬಯಸಿದ ಹಾಗೆ ತಯಾರಾಗ ಬೇಕಾಗಿರುವುದು ಪ್ರತಿಯೊಬ್ಬ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಯು ಪಾಲಿಸಬೇಕಾದ ತತ್ತ್ವ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ  ಪ್ರೊಫೆಸರ್  ವೆಂಕಟೇಶ್ ಬಾಬು ರವರು ಹೇಳಿದರು ಅವರು ನಗರದ ಆರ್ ಟಿ ಇ ಸಂಸ್ಥೆಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಕೌಶಲ್ಯಗಳು ಮತ್ತು ವಾಣಿಜ್ಯ ಪದವಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಉದ್ಯೋಗ ಮಾರುಕಟ್ಟೆ ಡಿಜಿಟಲ ಮಯವಾಗಿದೆ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪ್ರಾಯೋಗಿಕ ಜ್ಞಾನವನ್ನು ಪಡೆದು  ಮಾರುಕಟ್ಟೆಗೆ ಬೇಕಾಗುವ ಕೌಶಲ್ಯಗಳನ್ನು ಬೆಳಸಿಕೊಂಡರೆ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಾಣಬಹುದು ಇದಕ್ಕೆ ಬೇಕಾಗುವ ತಯಾರಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಪ್ರಾರಂಭಿಸುವದು ಒಳಿತು ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ದಿನನಿತ್ಯದಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರದ ಒಂದೊಂದು ತತ್ತ್ವಗಳನ್ನು ಪಾಲಿಸುತ್ತಾ ಹೋದರೆ ಮುಂದೆ ಜೀವನದಲ್ಲಿ ಪ್ರತಿಯೊಂದು ತತ್ತ್ವಗಳು ಉಪಯೋಗ ವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.ವಾಣಿಜ್ಯ ಶಾಸ್ತ್ರ ಪದವಿಯು ಉದ್ಯೋಗಗಳ ಕಣಜ ವಿದ್ದಂತೆ ವಿದ್ಯಾರ್ಥಿಗಳು ಕೌಶಲಗಳನ್ನು ರೂಡಿಸಿಕೊಂಡರೆ ತಮ್ಮದಾಗುತ್ತವೆ ಹಾಗೂ ಅತಿ ಹೆಚ್ಚು ವೇತನ ಪಡೆದು ಸುಸ್ಥಿರ ಜೀವನವನ್ನು ನಡೆಸಬಹುದು ಎಂದು ಹೇಳಿದರು.ವಾಣಿಜ್ಯಶಾಸ್ತ್ರವಿದ್ಯಾರ್ಥಿಗಳಿಗೆ ಬೇಕಾಗುವ ಕಂಪ್ಯೂಟರ್ ಜ್ಞಾನ ಸಂವಹನ ನಾಯಕತ್ವ ಗುಣ ಹಾಗೂ ಇತರೆ ಕೌಶಲ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀಮತಿ  ಎಸ್ ಕೆ ಕೋಟಿರವರು ಮಾತನಾಡುತ್ತಾ  ಅವರು ಮಾತನಾಡುತ್ತಾ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳು ಪ್ರಾಯೋ ಗಿಕವಾಗಿ ಹೆಚ್ಚು ಪ್ರಯತ್ನಗಳನ್ನು ಮಾಡುತ್ತಿರಬೇಕು ಪ್ರತಿ ಹಂತದಲ್ಲೂ ಪಠ್ಯದ ವಿಷಯವನ್ನು ಪ್ರಾಯೋಗಿಕವಾಗಿ ಹೇಗೆ ನಿಭಾಯಿಸಬಹುದು ಎಂಬುದನ್ನು ಪ್ರಯತ್ನಿಸುತ್ತಿದ್ದರೆ ಅದರ ನಿಜವಾದ ಜ್ಞಾನ ಪಡೆಯಲು ಸಾಧ್ಯ ಎಂದು ಹೇಳಿದರು. ಜೀವನದ ಯಶಸ್ಸಿಗೆ ಸಮಯದ ನಿರ್ವಹಣೆ   ಸಂವಹನ ಕ್ರಿಯೆ ನಾಯಕತ್ವದ ಗುಣಗಳನ್ನು ಅರಿತು ಕೊಳ್ಳುವುದು ಉತ್ತಮ. ತಂತ್ರಜ್ಞಾನಾಧಾರಿತ ಜಗತ್ತು ಈಗ ಬದಲಾಗುತ್ತಿದೆ ಹಾಗೆ ಪ್ರತಿದಿನ ಓಡುತ್ತಿರುತ್ತದೆ ಆ ಜಗತ್ತಿನ ಹಿಂದೆ ಓಡಿದಾಗ ಮಾತ್ರ ಅದನ್ನು ಮುಟ್ಟಲು ಸಾಧ್ಯ  ಎಂದು ಹೇಳಿದರು.