ಉದ್ಯೋಗ ಕಡಿತ ಮಸ್ಕ್ ಸಮರ್ಥನೆ

ವಾಷಿಂಗ್ಟನ್,ಏ.೧೮- ನಾವು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯನ್ನು ನಡೆಸುತ್ತಿಲ್ಲ. ಹೀಗಾಗಿ ಶೇ.೮೦ ರಷ್ಟು ಉದ್ಯೋಗಿಗಳನ್ನು ತೆಗೆದರೂ ಕಂಪನಿ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಲಾನ್ ಮಸ್ಕ್ ನೀವು ವೈಭವೀಕರಿಸಿದ ಕಾರ್ಯಕರ್ತ ಸಂಘಟನೆಯನ್ನು ನಡೆಸಲು ಪ್ರಯತ್ನಿಸದಿದ್ದರೆ ಮತ್ತು ಸೆನ್ಸರ್‌ಶಿಪ್ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು. ಹೀಗಾಗಿ ಶೇ.೮೦ ರಷ್ಟು ಉದ್ಯೋಗವನ್ನು ಕಡಿತ ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದರು.
ಸಾಧ್ಯವಾದಷ್ಟು ನ್ಯಾಯಯುತ ಮತ್ತು ಪಕ್ಷಪಾತವಿಲ್ಲದೇ ಕೆಲಸ ಮಾಡುವುದು ಹೊಸ ಟ್ವಿಟ್ಟರ್‌ನ ಗುರಿ. ಈ ಕಾರಣಕ್ಕೆ ನಾವು ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಒಲವು ತೋರುವುದಿಲ್ಲ ಎಂದರು. ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದಾಗ ಸುಮಾರು ೮ ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ ೨ ಸಾವಿರಕ್ಕೆ ಇಳಿಕೆಯಾಗಿದ್ದು ಶೇ.೮೦ರಷ್ಟು ಮಂದಿಗೆ ಗೇಟ್‌ಪಾಸ್ ನೀಡಲಾಗಿದೆ.