ಉದ್ಯೋಗ ಕಡಿತ ಕಂಪನಿಯ ಪಟ್ಟಿಗೆ ಎಚ್‌ಪಿ

ನವದೆಹಲಿ,ನ.೨೩- ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ತಯಾರಿಕಾ ದೈತ್ಯ ಕಂಪನಿ ಹೆವ್ಲೆಟ್-ಪ್ಯಾಕರ್ಡ್ ಎಚ್ ಪಿ ಉದ್ಯೋಗಿಗಳನ್ನು ವಜಾ ಮಾಡುವ ಸಾಮೂಹಿಕ ವಜಾ ಘೋಷಿಸಿದ ಟೆಕ್ ಕಂಪನಿಗಳ ಪಟ್ಟಿಗೆ ಸೇರಿಕೊಂಡಿದೆ.
ಕಂಪನಿ ೨೦೨೫ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸುಮಾರು ೬ ಸಾವಿರ ಉದ್ಯೋಗ ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ, ಜಾಗತಿಕವಾಗಿ ಈಗಿರುವ ಉದ್ಯೋಗಿಗಳಲ್ಲಿ ಶೇಕಡಾ ೧೨ ರಷ್ಟು ಕಡಿತ ಮಾಡಲು ಉದ್ದೇಶಿಸಿದೆ.
ಕಂಪನಿ ಸರಿಸುಮಾರು ೪,೦೦೦-೬,೦೦೦ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. ಈ ಕ್ರಮಗಳು ೨೦೨೫ ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ” ಎಂದು ಕಂಪನಿಯ ೨೦೨೨ರ ವಾರ್ಷಿಕ ಹಣಕಾಸು ವರದಿಯಲ್ಲಿ ಈ ವಿಷಯ ತಿಳಿಸಿದೆ.
ಕಂಪನಿ ಪ್ರಸ್ತುತ ಸುಮಾರು ೫೦ ಸಾವಿರ ಮಂದಿಯನ್ನು ನೇಮಿಸಿಕೊಂಡಿದೆ ಮತ್ತು ೧.೪ ಶತಕೋಟಿ ಡಾಲರ್ ವೆಚ್ಚ ಕಡಿತ ಯೋಜನೆಯ ಭಾಗವಾಗಿ ಮುಂಬರುವ ವರ್ಷಗಳಲ್ಲಿ ಸಿಬ್ಬಂಧಿಯನ್ನು ವಜಾ ಮಾಡುವ ಪ್ರಕ್ರಿಯೆ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.
ಪಿಸಿ ಮತ್ತು ಲ್ಯಾಪ್‌ಟಾಪ್ ವಿಭಾಗದಲ್ಲಿ ಎಚ್ ಪಿ ಕಂಪನಿ ಕಡಿಮೆ ಮಾರಾಟ ಮಾಡಿದ ನಂತರ ನಿರ್ಧಾರಕ್ಕೆ ಬರಲಾಗಿದೆ. ಸಾಂಕ್ರಾಮಿಕ ಅವಧಿಯಲ್ಲಿ ಎರಡೂ ವಿಭಾಗಗಳಲ್ಲಿನ ಮಾರಾಟ ಗಣನೀಯವಾಗಿ ಕುಸಿತ ಕಂಡಿದೆ.ಜೊತೆಗೆ ಆರ್ಥಿಕ ಹಿಂಜರಿತ ಮತ್ತು ಗಗನಕ್ಕೇರಿದ ಹಣದುಬ್ಬರದಿಂದ ಉಂಟಾದ ಆರ್ಥಿಕ ಪರಿಸ್ಥಿತಿಗಳಿಂದ ನಿರ್ಧಾರವು ಬಹುಶಃ ಉಲ್ಬಣಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ.
ಪಿಸಿ ತಯಾರಕ ತನ್ನ ವರದಿಯಲ್ಲಿ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿತಕ್ಕಿಂತ ಕಡಿಮೆ ಲಾಭ ಹೊಂದಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ಮೇರಿ ಮೈಯರ್ಸ್ ಹೇಳಿದ್ದಾರೆ
ನಾಲ್ಕನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ೧೧ ಶೇಕಡಾ ಕುಸಿತ ಕಂಡಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ೧೪.೮ ಬಿಲಿಯನ್ ಡಾಲರ್ ಆಗಿತ್ತು ಎಂದು ವರದಿಯಲ್ಲಿ ಈ ವಿಷಯ ತಿಳಿಸಿದೆಪ್ರಮುಖವಾಗಿ ಜಾಗತಿಕ ಮಂದಗತಿಯ ಕಾರಣದಿಂದಾಗಿ ಅಮೆಜಾನ್, ಮೆಟಾ ಮತ್ತು ಟ್ವಿಟರ್‍ನಂತಹ ಪ್ರಮುಖ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಕಡಿತ ಮಾಡಿವೆ.
ಟ್ವಿಟರ್ ಅರ್ಧದಷ್ಟು ಉದ್ಯೋಗಿಗಳನ್ನು ವಜಾ ಮಾಡಿದರೆ ,ಮೆಟಾ ೧೧,೦೦೦ ಉದ್ಯೋಗಿಗಳನ್ನು ಅಮೆಜಾನ್ ೧೦,೦೦೦ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ದೃಢಪಡಿಸಿದೆ