ಉದ್ಯೋಗಿಯಾಗಿ ಉದ್ಯೋಗ ನೀಡು-ಆರ್ಥಿಕ ಅಭಿವೃಧ್ಧಿ ಸಾಧ್ಯ

ಕಲಬುರಗಿ.ಜು.14: ಉದ್ಯಮಗಳನ್ನು ಪ್ರಾರಂಭಿಸಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ಪಡೆದು ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಅಭಿವೃಧ್ಧಿ ಸಾಧಿಸಬೇಕು ಎಂದು ಶ್ರೀ. ಜಿ ಯು ಹುಡೇದ, ಜಂಟಿ ನಿರ್ದೇಶಕರು, ಸಿಡಾಕ್, ರಾಯಚೂರು ಇವರು ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸಾಲ ಸೌಲಭ್ಯಗಳು ಮತ್ತು ಇತರ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವದು ಎಂದು ತಿಳಿಸಿದರು.
ಶ್ರೀ. ರಾಜೇಶ ಭಾವಗಿ, ಜಂಟಿ ನಿರ್ದೇಶಕರು, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ, ಕಲಬುರಗಿ ಇವರು ಮಾತನಾಡುತ್ತಾ ವಿದ್ಯಾವಂತರು ಸ್ವಯಂ ಉದ್ಯೂಗಗಳನ್ನು ಪ್ರಾರಂಭಿಸಲು ಮುಂದೆ ಬರಬೇಕು. ಕೈಗಾರಿಕಾ ಮತ್ತು ಸೇವಾ ವಿಭಾಗದಲ್ಲಿ ಉದ್ಯಮಗಳನ್ನು ಪ್ರಾರಂಭಿಸಲು ಸಾಕಷ್ಟು ಅವಕಾಶಗಳು ಲಭ್ಯವಿರುತ್ತದೆ. ನಮ್ಮ ದೇಶದಲ್ಲಿ ಯುವ ಜನ ಹೆಚ್ಚಿನ ಸಂಖೆಯಲ್ಲಿದ್ದು ಬುಧ್ಧಿವಂತರಿದ್ದಾರೆ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಚಟುವಟಿಕೆ ಮತ್ತು ಸೇವಾ ಚಟುವಟಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಅವಕಶವಿರುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷರು ಡಾ. ಜ್ಯೆಕಿಷನ್ ಠಾಕೂರ್ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜ, ಮಹಾಗಾಂವ್ ಕ್ರಾಸ್, ಕಲಬುರಗಿ ಇವರು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಕುರಿತು ಸದುಪಯೋಗ ಹೇಗೆ ಮಡಬೆಕುಂದು ವಿವಿಧ ಉಧಾಹರಣೆ ಮುಖಾಂತರ ತಿಳಿಸಿದರು. ಶ್ರೀ. ಸಿದ್ದಲಿಂಗ ಹತ್ತಿ ಸದಸ್ಯರು, ಅಆಅ ಮಹಾಗಾಂವ್ ಕ್ರಾಸ್, ಶ್ರೀ. ವೀರಣ್ಣ ರಟಕಲ್ ಸದಸ್ಯರು, ಅಆಅ ಮಹಾಗಾಂವ್ ಕ್ರಾಸ್À, ಸರಕಾರಿ ಪ್ರಥಮ ದರ್ಜೆ ಕಾಲೇಜ, ಮಹಾಗಾಂವ್ ಕ್ರಾಸ್ ಮತ್ತು ಶ್ರೀ. ಅಣ್ಣಾರಾವ್ ಎಸ್. ಪಾಟೀಲ Sಣಚಿಜಿಜಿ Seಛಿಡಿeಣಚಿಡಿಥಿ ಸರಕಾರಿ ಪ್ರಥಮ ದರ್ಜೆ ಕಾಲೇಜ, ಮಹಾಗಾಂವ್ ಕ್ರಾಸ್, ಕಲಬುರಗಿ,ಇವರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಸಮಾರಂಭದಲ್ಲಿ ಪ್ರೋ. ಸುಜಾತಾ ದೊಡ್ಡಮ ಸಂಯೋಜಕರು ನಿಯೋಜನೆ ಕೋಶ ಸರಕಾರಿ ಪ್ರಥಮ ದರ್ಜೆ ಕಾಲೇಜ, ಮಹಾಗಾಂವ್ ಕ್ರಾಸ್, ಕಲಬುರಗಿ ಇವರು ಸ್ವಾಗತಿಸಿದರು, ಕೂ. ಮಾಧುರಿ ಮಾನಕರ್, ತರಬೇತಿದಾರರು, ಸಿಡಾಕ್, ಕಲಬುರಗಿ ವಂದಿಸಿದರು, ಸಿಡಾಕ್ ತರಬೇತುದಾರರಾದ ಶ್ರೀಮತಿ. ಜಯಶ್ರೀ ಎಸ್. ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜ, ಮಹಾಗಾಂವ್ ಕ್ರಾಸ್, ಕಲಬುರಗಿಯ ಉಪನ್ಯಾಸಕರು ಮತ್ತು ಇನ್ನಿತರು ಸಿಭಂದಿ ವರ್ಗದವರು ಭಾಗವಹಿಸಿದ್ದರು.