ಉದ್ಯೋಗಿಗಳ ವಜಾ ಒಪ್ಪಿಕೊಂಡ ವಿಶಾಲ್

ನವದೆಹಲಿ,ಆ.೨೯- ಜೂಮ್ ವಿಡಿಯೋ ಕರೆ ಕಂಪನಿ ಸುಮಾರು ೯೦೦ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮಾದವನ್ನು ಕಂಪನಿಯ ಸಿಇಒ ವಿಶಾಲ್ ಗಾರ್ಗ್ ಒಪ್ಪಿಕೊಂಡಿದ್ದಾರೆ.

ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗಾರ್ಗ್ ಅವರು ೨೦೨೧ ರಲ್ಲಿ ತಮ್ಮ ಜೂಮ್ ಕರೆಗೆ ಹೆಚ್ಚು ಹೆಸರುವಾಸಿಯಾಗಿತ್ತು. ಆ ಸಮಯದಲ್ಲಿ ಅವರು ೯೦೦ ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿ ಉದ್ಯೋಗಿಗಳ ಕೆಂಗಣ್ಣಿಗೆ ಸಿಇಓ ಗುರಿಯಾಗಿದ್ದರು.

೨೦೨೨ ರಲ್ಲಿ, ಬೆಟರ್ ಡಾಟ್ ಕಾಮ್ , ಎಸ್‌ಪಿಸಿಎ ಅರೋರಾ ಅಕ್ವಿಸಿಷನ್ ಕಾರ್ಪೊರೇಶನ್ ಜೊತೆ ವಿಲೀನಗೊಂಡು ಸಂಯೋಜಿತ ಘಟಕವಾಗಿ ಬೆಟರ್ ಹೋಮ್ ಮತ್ತು ಫೈನಾನ್ಸ್ ಹೋಲ್ಡಿಂಗ್ ಕಂಪನಿ ಎಂದು ಕರೆಯಲಾಗುತ್ತದೆ. ಕಂಪನಿ ಇತ್ತೀಚೆಗೆ ನಾಸ್ಡಾಕ್ ಕ್ಯಾಪಿಟಲ್ ಮಾರ್ಕೆಟ್‌ನಲ್ಲಿಗೆ ಸಾರ್ವಜನಿಕ ಪಾದಾರ್ಪಣೆ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಶಾಲ್ ಗಾರ್ಗ್, ಕುಖ್ಯಾತ ಜೂಮ್ ಕರೆ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದು ಹಲವು ಉದ್ಯೋಗಿಗಳಿಗೆ ಉದ್ಯೋಗ ಕಡಿತದ “ದಂಡನೆ ಪ್ರಮಾದ” ಮಾಡಿದ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ.

ಕಂಪನಿಯ ಒಳಗೆ ಮತ್ತು ಹೊರಗೆ ನಂಬಿಕೆ ಸ್ಥಾಪಿಸುವ ಅಗತ್ಯವಿತ್ತು. ಹೀಗಾಗಿ ೯೦೦ಕ್ಕೂ ಹೆಚ್ಚು ಸಿಬ್ಬಂಧಿ ವಜಾ ಮಾಡಬೇಕಾಯಿತು. “ಬಹಳಷ್ಟು ನಾಯಕತ್ವ ತರಬೇತಿ ತುಂಬಾ ಮಿಷನ್-ಕೇಂದ್ರಿತ, ಗ್ರಾಹಕ ಕೇಂದ್ರಿತ, ಮತ್ತು ನಿಜವಾಗಿಯೂ, ಬೆಳವಣಿಗೆ ಹೆಚ್ಚಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದಿದ್ದಾರೆ.

ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವುದು ಕೂಡ ಕಂಪನಿಯ ಉದ್ದೇಶವಾಗಿತ್ತು. ಹೀಗಾಗಿ ಕಂಪನಿ ಉದ್ಯೋಗಿಗಳನ್ನು ಕಡಿತ ಮಾಡುವಂತಾಯಿತು ಎಂದು ತಮ್ಮ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.