ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಶಿಶುಕ್ಷು ಮೇಳ

ವಿಜಯಪುರ: ಜೂ.13:ಯುವಕರಿಗೆ ಉದ್ಯಮಕ್ಕೆ ಬೇಕಾಗಿರುವ ಕೌಶಲ್ಯಗಳನ್ನು ವಿವಿಧ ಉದ್ಯಮಗಳಲ್ಲಿ ಒಂದು ವರ್ಷ ತರಬೇತಿ ಪಡೆದು ಅಲ್ಲಿಯೇ ಉದ್ಯೋಗ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಶಿಶಿಕ್ಷ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಉದ್ಯೋಗ ವಿನಿಮಯ ಅಧಿಕಾರಿ ಗುರುಪಾದಯ್ಯ ಹಿರೇಮಠ ಹೇಳಿದರು.
ಇಂದು ನಗರದ ಎಸ್.ಎಸೆಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಬಲೇಶ್ವರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಬಿ.ಎಲ್.ಡಿ.ಇ ಐಟಿಐ ಸಹಯೋಗದಲ್ಲಿ ವಿಜಯಪುರ ಜಿಲ್ಲಾ ರಾಷ್ಟ್ರೀಯ ಶಿಶಿಕ್ಷು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಹತ್ತನೆ ತರಗತಿ, ಐಟಿಐ, ಡಿಪ್ಲೋಮಾ, ಪಿ.ಯು.ಸಿ ಹಾಗೂ ಪದವಿಗಳಲ್ಲಿ ಪಾಸಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ಶಿಶಿಕ್ಷು ಮೇಳದಲ್ಲಿ ಭಾಗಿಯಾದ ನಿರುದ್ಯೋಗ ಯುವಕ, ಯುವತಿಯರಿಗೆ ಹೆಚ್ಚಿನ ಕೌಶಲ್ಯವನ್ನು ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸದರಿ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಶಿಶಿಕ್ಷು ಮೇಳದಲ್ಲಿ ಬಿಜ್ಜರಗಿ ಮೋಟರ್ಸ್, ಕಲ್ಲೇಶರ ಅರ್ಥ ಮೂವರಸ್, ಆರ್.ಎನ್.ಎಸ್ ಮೋಟರ್ಸ್, ಹುಂಡೈ ಮೋಟರ್ಸ್ ಅಲ್ಲದೆ ವಿವಿದ 15ಕ್ಕೂ ಹೆಚ್ಚು ಉದ್ದಿಮೆದಾರರು ಪಾಕಲಗಂಡಿದ್ದರು ಈ ಮೇಳದಲ್ಲಿ ಒಟ್ಟು 180 ಅಭ್ಯರ್ಥಿಗಳು ಪಾಲೊಂಡು ವಿವಿಧ ವೃತ್ತಿಯ 93 ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾದರು
ಜಿಲ್ಲಾ ಉದ್ಯೋಗ ಮೇಳದ ನೋಡಲ್ ಅಧಿಕಾರಿ ಜಗದೀಶ ಧನಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಎಲ್.ಡಿ.ಇ ಐಟಿಐ ಪ್ರಾಚಾರ್ಯರಾದ ಎಮ್.ಡಿ ಪಡಸಲಗಿ ಅಥಿತಿಗಳಾಗಿ ಭಾಗವಹಿಸಿದ್ದರು. ಈಲ್ಲಾ ಶಿಶಿಕ್ಷು ನೋಡಲ್ ಅಧಿಕಾರಿ ರಂಗು ಮುಂಜೆ, ರುಡ್‍ಸೆಟ್ ಅಧಿಕಾರಿ ಜಗದೀಶ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.