
ಬೀದರ:ಸೆ.12:ಕೌಶಲ್ಯ ಎಂಬುದು ಕುಶಲಕರ್ಮಿಗಳ ಜೀವಾಳ, ಇದು ಇದ್ದರೆ, ನೌಕರಿಗಾಗಿ ಪರಿತಪಿಸುವ ಭ್ರಮೆಯೆ ಬರೋದಿಲ್ಲ. ನೌಕರಿ ಇದು ಎಲ್ಲರಿಗೂ ಬೇಕು, ಈ ದಿಶೆಯಲ್ಲಿ ಇಲಾಖೆ ಪ್ರತಿತಿಂಗಳ ಎರಡನೇ ಸೋಮವಾರ ಶಿಶಿಕ್ಷು ಮೇಳ/ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದು ಕಲಬುರಗಿ ವಿಭಾಗೀಯ ಕಛೇರಿಯ ಸ.ನಿ. ಬಸವರಾಜ ಕಣಮಸ್ ನುಡಿದರು.
ಬಸವಕಲ್ಯಾಣ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳವನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ಡಿ.ಜಿ.ಟಿ. ನಿಯೋಜಿತ ಅಧಿಕಾರಿಗಳಾದ ದಿಗ್ವಿಜಯಸಿಂಗ್ ಮೀನಾ ಮಾತನಾಡಿ ಇಂದು ಜಿಲ್ಲೆಯಲ್ಲಿ ಶಿಶಿಕ್ಷು ಮೇಳಗಳನ್ನು ಆಯೋಜಿಸುತ್ತಿರುವುದರಿಂದ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಐ.ಟಿ.ಐ ಮಕ್ಕಳು ತಮ್ಮ ಪರಿಪೂರ್ಣತೆಯ ಕೌಶಲ್ಯತೆಯ ಅಭಿವೃಧ್ಧಿಗಾಗಿ ಕಡ್ಡಾಯವಾಗಿ ಅಪ್ರೆಂಟಿಶಿಪ್ ಮಾಡಲು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಕೋಶಾಧ್ಯಕóರಾದ ಶ್ರೀ ಶಿವಶಂಕರ ಟೋಕರೆ ಮುಖ್ಯ ಅತಿಥಿಗಳಾಗಿ ಮಾತನಾಡಿ ನೌಕರಿಗಳ ಕೊರತೆಯಿಲ್ಲ ಆದರೆ ಪ್ರಾಯೋಗಿಕ ಪರೀಣಿತಿಯ ಕೊರತೆಯಿದೆ. ತಾವು ಕಾಟಾಚಾರಕ್ಕಾಗಿ ಓದದೆ ಕರಗತ ಮಾಡಿಕೊಳ್ಳಲು ಓದಿದರೆ ತಮ್ಮ ಭವಿಷ್ಯ ತಮ್ಮ ಕೈಯಲ್ಲಿದೆ. ಐ.ಟಿ.ಐ ಇದು ಕಡಿಮೆ ಅವಧಿಯ ಖರ್ಚಿಲ್ಲದ ಶಿಕ್ಷಣ ಇಲ್ಲಿ ಅಗ್ರ ಶ್ರೇಯಾಂಕ ಅಂಕಗಳಿಗೆ ಬೆಲೆಯಿಲ್ಲ ಕೇವಲ ತಮ್ಮ ಪ್ರಾಯೋಗಿಕ ಜ್ಞಾನ ಸರಿಯಾಗಿದ್ದರೆ ನೌಕರಿ ಮನೆ ಬಾಗಿಲಿಗೆ ಎಂಬುದು ಬಿಚ್ಚಿ ಹೇಳಬೇಕಾಗಿಲ್ಲ. ನೀವೆಲ್ಲರು ಒಳ್ಳೆಯ ಶಿಕ್ಷಣವನ್ನು ಕಲಿತು ಆಲಸ್ಯವನ್ನು ಬಿಟ್ಟು ಆದರ್ಶ ಕುಶಲಕರ್ಮಿಗಳಾಗಿ ಹೊರಹೊಮ್ಮಲು ನಿರಂತರವಾಗಿ ಉದ್ಯೋಗಮೇಳಗಳು ಆಯೋಜಿಸಲಾಗುತ್ತಿದೆ ಎಂದು ನುಡಿದರು.
ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಪ್ರಲ್ಹಾದ ನಾಡಗೌಡ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಇಂದು ಐ.ಟಿ.ಐ. ಪಾಸಾದ ಮಕ್ಕಳ ಹಿತದೃಷ್ಟಿಯಿಂದ ಹತ್ತು ಕಂಪನಿಗಳಿಗೆ ಕರೆಯಿಸಿ ಉದ್ಯೊಗ ಮೇಳ ಆಯೋಜಿಸಿದೆ. ಇಂದು ನಮ್ಮಲ್ಲಿ 278 ವಿವಿಧ ವೃತ್ತಿಯ ತರಬೇತಿದಾರರು ಹಾಜರಾಗಿದ್ದು ಅದರಲ್ಲಿ 146 ಆಯ್ಕೆಯಾಗಿದ್ದಾರೆ ಎಂದು ನುಡಿದರು.
ವೇದಿಕೆ ಮೇಲೆ ಕಮಲನಗರ ಐ.ಟಿ.ಐ. ಪ್ರಾಚಾರ್ಯರಾದ ಬಾಬು ರಾಜೋಳಕರ್ ಹುಮನಾಬಾದ್ ಐ.ಟಿ.ಐ. ಪ್ರಾಚಾರ್ಯರಾದ ನಾಗಭೂಷಣ ಆರ್ ಮಠ್ ಉಪಸ್ಥಿತರಿದ್ದರು. ಮೊದಲಿಗೆ ರಮೇಶ ಹಾದಿಮನಿ ಸ್ವಾಗತಿಸಿದರೆ ರಾಜಕುಮಾರ ಕುಂಬಾರ್ ನಿರೂಪಿಸಿದರೆ ಮೊಹ್ಮ್ಮದ್ ಆಸಿಫ್ ಉಲ್ಲಾ ವಂದಿಸಿದರು.
ಫುಕುಕು ಕೈಗಾರಿಕೆಯಲ್ಲಿ ಬೆಳಗಾವಿಗೆ 09 ಜನ ಆಯ್ಕೆ ಟ್ಯಾಲೆನ್ಸೇತು ಪೂನಾ ಕೈಗಾರಿಕೆಗೆ 55 ಜನ, ಸಾಯಿ ಲೈಫ್ ಸೈನ್ಸಿಗೆ 05 ಜನ, ಮಹೀಂದ್ರಾ & ಮಹೀಂದಾ ಜಹೀರಾಬಾದ್ ಕಾರ್ಖಾನೆಗೆ 45 ಜನ, ಅಡೇಕೊ ಕಾರ್ಖಾನೆ ಕೋಲಾರಗೆ 10 ಜನ, ಎ.ಎಮ್. ಎಲ್. ಪೂನಾ ಕಾರ್ಖಾನೆಗೆ 13 ಜನ, ಜಯಶ್ರೀ ಕಾರ್ಖಾನೆ ಪೂನಾಗೆ 09 ಜನ ಇಂದು ಆಯ್ಕೆಯಾಗಿರುವ ಬಗ್ಗೆ ಸಂಬಂಧಪಟ್ಟ ಮಾನವ ಸಂಪನ್ಮೂಲ ಅಧಿಕಾರಿಗಳು ಕೊನೆಯಲ್ಲಿ ಮಾಹಿತಿ ನೀಡಿದರು.