ಉದ್ಯೋಗದಲ್ಲಿ ಸ್ಥಳೀಯರಿಗೆ ವಂಚನೆ- ಸುದರ್ಶನ್ ಬೇಸರ

ಕೋಲಾರ,ಸೆ.೧೭- ವೇಮಗಲ್ ಕೈಗಾರಿಕಾ ಪ್ರದೇಶದ ಪೇಸ್-೨ ರಲ್ಲಿ ಸುಮಾರು ೫೧೧ ಎಕರೆ ಭೂ ಸ್ವಾಧೀನ ಪಡಿಸಿಕೊಂಡಿದ್ದು, ಇದರ ಹಿನ್ನಲೆ ವೇಮಗಲ್ ಪ್ರವಾಸಿ ಮಂದಿರದಲ್ಲಿ ಭೂ ಸ್ವಾಧೀನಕ್ಕೊಳಪಡುವ ರೈತರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ ವೇಮಗಲ್ ಭಾಗದ ಪೇಸ್ -೧ ರಲ್ಲಿ ಶುರುವಾಗಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕೆಲಸ ನೀಡುತ್ತಿಲ್ಲವೆಂದು ಸಾಕಷ್ಟು ದೂರುಗಳು ಬಂದಿವೆ ಎಂದರು
ಸ್ಥಳೀಯರಿಂದ ಕಂಪನಿಗಳಿಗೆ ಏನು ಸಮಸ್ಯೆಗಳು ಆಗುತ್ತದೆ ಹೇಳಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಸ್ಥಳೀಯ ರೈತರು ಕೈಗಾರಿಕೆಗಳು ಸ್ಥಾಪನೆ ಮಾಡಲು ಭೂಮಿ ನೀಡಿದ್ದು ತಪ್ಪಾಯಿತಾ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಕುರುಗಲ್, ಮಲಿಯಪ್ಪನಹಳ್ಳಿ ಮತ್ತು ಹಾರ್ಜೇನಹಳ್ಳಿ ಭಾಗದಲ್ಲಿ ಪೇಸ್ -೨ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದಾಗಿರುವುದು ಸರಿಯುಷ್ಟೇ. ಆದರೆ ಅಲ್ಲಿನ ರೈತರು ಆಯಾ ಹೊತ್ತಿಗೆ ಬೆಳೆಗಳನ್ನು ಬೆಳೆದುಕೊಂಡು ಜೀವನ ಮಾಡುತ್ತಿರುತ್ತಾರೆ. ಈಗಲಾದರೂ ಎಚ್ಚೆತ್ತುಕೊಂಡು ಜಮೀನು ನೀಡಿದ ಸ್ಥಳೀಯರಿಗೆ ಕೆಲಸ ನೀಡಿ ಎಂದರು.
ನರಸಾಪುರ ಭಾಗದ ಮಿಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ೧.೨೫ ಕೋಟಿ ರೂ ನೀಡಿದ್ದು, ಇಲ್ಲಿಯೂ ಕೂಡ ೧.೨೫ ಕೋಟಿ ರೂ ನೀಡಬೇಕೆಂದು ರೈತರ ಪರವಾಗಿ ಧನಿ ಎತ್ತಿ ಒತ್ತಾಯಿಸಿದರು.
ಭೂಮಿ ಕಳೆದುಕೊಂಡವರಿಗೆ ಮೊದಲಿನಿಂದಲೇ ಕೆಲಸ ನೀಡಬೇಕು. ಸ್ಥಳೀಯರಿಗೆ ಖಾಯಂ ಕೆಲಸ ನೀಡಬೇಕು. ಸ್ಥಳೀಯ ಕಂಪನಿಗಳಲ್ಲಿ ಸಿ.ಎಸ್.ಆರ್ ನಿಧಿಯನ್ನು ಸ್ಥಳೀಯ ಭಾಗದಲ್ಲಿ ಬಳಸಬೇಕು ಇದನ್ನ ಬೇರೆ ಕಡೆ ಬಳಸಿದರೆ ಸ್ಥಳೀಯ ಭಾಗದಲ್ಲಿ ಬೆಳವಣಿಗೆ ಆಗುವುದಿಲ್ಲ ಎಂದು ತಿಳಿಸಿದರು
ಭೂ ಸ್ವಾಧೀನ ಮುನ್ನವೇ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಹೊಂದಿಕೊಂಡಿರುವ ಜಾಗಗಳನ್ನು ಸ್ವಾದೀನದಿಂದ ಕೈ ಬಿಡಬೇಕು. ದೇವಾಲಯ ಮತ್ತು ಸ್ಮಶಾನ ಜಾಗಗಳನ್ನು ಬೀಡಬೇಕು, ರಸ್ತೆಗೆ ಹೊಂದಿಕೊಂಡಿರುವ ಮನೆಗಳ ಜಾಗವನ್ನು ಮೊದಲಿನ ಹಂತದಲ್ಲಿಯೇ ಬೀಡಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಕೆ.ಐ.ಎ.ಡಿ.ಬಿ ವಿಶೇಷ ಭೂಸ್ವಾದೀನ ಅಧಿಕಾರಿ-೧ ವೆಂಕಟೇಶ್. ಇಂಜಿನಿಯರ್ ಕೃಷ್ಣಮೂರ್ತಿ, ಸ್ಥಳೀಯ ರೈತರು ಮುಖಂಡರು ಭಾಗವಹಿಸಿದ್ದರು.