ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.17: ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್ (ಎಂಬಿಎ) ಕಾಲೇಜಿನಲ್ಲಿ ಪದವಿ ಪ್ರಧಾನ ಮತ್ತು ಱ್ಯಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಿನ್ನೆ ನಡೆಯಿತು.
ಜಿಂದಾಲ್ ಕಂಪನಿಯ ಎಕ್ಷಿಕ್ಯೂಟೀವ್ ಉಪಾಧ್ಯಕ್ಷ ವಿಶ್ವನಾಥ ಸೂರ‍್ಯನಾರಾಯಣನ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಟ್ಯಾಕ್ಸ್ ಪ್ರಾಕ್ಟೀಷರ್ಸ್ ಆಫ್ ಇಂಡಿಯಾದ ಅಧ್ಯಕ್ಷ ಶೀಧರ ಪಾರ್ಥಸಾರಥಿ ಅವರು ಕಾರ್ಯಕ್ರಮ ಉಧ್ಘಾಟಿಸಿದರು.
ಸೂರ್ಯನಾರಾಯಣನ್ ಮಾತನಾಡಿ, ಪ್ರಸ್ತುತ ಜಾಗತಿಕ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳಿಗೆ ಪದವಿಗಳೇ ಮುಖ್ಯವಲ್ಲ. ಅದರ ಜೊತೆಗೆ ನಿರ್ವಹಣಾ ಶಾಸ್ತ್ರದಲ್ಲಿ ವಿನೂತನ ತಂತ್ರಾಂಶಗಳುಳ್ಳ ಇತರೆ ವೃತ್ತಿಪರ ಪದವಿಗಳನ್ನು ಹೊಂದಬೇಕು. ದೇಶ ವಿದೇಶಗಳಲ್ಲಿ ಉದ್ಯಮಿಗಳಾಗಿ ಸ್ವಾವಲಂಬಿಗಳಾಗಿ ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು. ವಿವಿಧ ವಲಯಗಳಲ್ಲಿ ಉನ್ನತ ವೃತಿಪರ ಸ್ಥಾನಗಳನ್ನು ಹೊಂದಿ ಸಂಸ್ಥೆಗಳ ಉತ್ತಮ ನಿರ್ವಹಣೆಯೊಂದಿಗೆ ಸಂಘದ ಮತ್ತು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕೆಂದರು.
ಜಿಂದಾಲ್ ಕಂಪನಿಯ ಎಕ್ಷಿಕ್ಯೂಟೀವ್ ಉಪಾಧ್ಯಕ್ಷ ವಿಶ್ವನಾಥ ಸರ‍್ಯನಾರಾಯಣನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಸರಿಯಾದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು. ವೃತ್ತಿಯಲ್ಲಿ ಶ್ರದ್ಧೆ, ಆಸಕ್ತಿ ಕ್ರಿಯಾಶೀಲತೆಯನ್ನು ಅಳವಡಿಸಿಕೊಳ್ಳಬೇಕು. ನಿರ್ವಹಣೆ ಮತ್ತು ಆಡಳಿತ ವಿಭಾಗದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಇವೆ. ಕಲಿಕೆಯ ಜೊತೆಗೆ ಜಾಗತಿಕಮಟ್ಟದಲ್ಲಿ ಸ್ಪರ್ಧಾತ್ಮಕ ಭಾವನೆಯನ್ನು ಬೆಳಸಿಕೊಳ್ಳಬೇಕು ಈ ಕಾರ್ಯವನ್ನು ನಾನು ಮಾಡಬಲ್ಲೆನೇ ಎಂಬ ಭಾವನೆ ಬರಬಾರದು ನಾನು ಮಾಡಬಲ್ಲೇ ಎಂಬ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ 2019-21 ನೇ ಸಾಲಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪ್ರಕಟಿಸಿರುವ ಎಲ್ಲಾ ಮೂರು ಱ್ಯಾಂಕ್ ಗಳನ್ನು ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವೀ. ವಿ. ಸಂಘದ ಅಧ್ಯಕ್ಷ ಹೆಚ್.ಎಂ. ಗುರುಸಿದ್ಧಸ್ವಾಮಿಯವರು ಸಂಘದ ಪರಂಪರೆಯ ಕುರಿತು ತಿಳಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ವೀ ವಿ ಸಂಘವನ್ನು ಸ್ಥಾಪಿಸಲು ಕಾರಣರಾದ ಎಲ್ಲಾ ದಾನಿಗಳನ್ನು ಸ್ಮರಿಸಿದರು. ನಮ್ಮ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡಿದ ಎಲ್ಲಾ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಿ. ವಿ. ಬಸವರಾಜ ಅವರು ಪದವಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಸಣ್ಣಬಸವರಾಜ, ಆಡಳಿತ ಮಂಡಳಿ ಸದಸ್ಯ ನಾಗರಾಜ ಶರ್ಮ ವಿ, ವೈ. ರವಿ, ಬಿ. ರವೀಂದ್ರನಾಥ ಇವರು ಉಪಸ್ಥಿತರಿದ್ದರು. ಸ್ವಾಗತ ಮಾಡಿದ ಡಾ. ಕೆ. ಟಿ. ಗೋಪಿ, ನಿರ್ದೇಶಕರು ಇವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಹ ಪ್ರಾಧ್ಯಾಪಕರಾದ ಡಾ. ಬಿ. ಶೈಲಜ ನಿರೂಪಿಸಿದರು. ರಂಜಿತ ವಂದನಾರ್ಪಣೆ ಮಾಡಿದರು. ಜ್ಯೋತಿ ಕೆ, ಬಿ.ದಿವಾಕರ, ಎನ್. ವಿದ್ಯಾಶ್ರೀ, ಮತ್ತು ಭೋದಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.