ಉದ್ಯೋಗಖಾತ್ರಿ ಮಾನವದಿನ ಹೆಚ್ಚಳಕ್ಕೆ ಮನವಿ

ಕಲಬುರಗಿ ನ 3: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು 200 ಕ್ಕೆ ಹೆಚ್ಚಿಸುವಂತೆ ಕೋರಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘ(ಗ್ರಾಕೂಸ)ದಿಂದ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಕೋವಿಡ್ 19,ಅತಿವೃಷ್ಠಿ ಮತ್ತು ಪ್ರವಾಹದಿಂದ ಕಂಗೆಟ್ಟಿರುವ ಕೂಲಿ ಕಾರ್ಮಿಕರಿಗೆ ಪಡಿತರ ಮೂಲಕ ಇನ್ನೂ 6 ತಿಂಗಳು ತಲಾ 5 ಕೆಜಿಯಂತೆ ಆಹಾರ ಧಾನ್ಯ ನೀಡುವಂತೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಪದರ್ಶನದಲ್ಲಿ ಪ್ರಕಾಶ ಬೆಳಮಗಿ,ಗುರುರಾಜ ಕೂಡಲ ಹಂಗರಗಿ,ಕಾವೇರಿ ಯಡ್ರಾಮಿ,ಸಪ್ನದೀಪಾ ಮೊಳಕೇರಿ,ನಿರ್ಮಲಾ,ಶರಣುಕುಂಬಾರ,ಬಸವರಾಜ ಸೇರಿದಂತೆ ಅನೇಕರು ಪಾಲ್ಗೊಂಡರು