ಉದ್ಯಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ಸಿಂದಗಿ;ಜ.5: ಭೂಮಿಯ ಅಂರ್ತಜಲ ಹೆಚ್ಚಿಸಲು ಹಿಂದಿನ ಕಾಲದಲ್ಲಿ ಇಂಗು ಬಜ್ಜಲುಗಳನ್ನು ನಿರ್ಮಾಣ ಮಾಡುತ್ತಿದ್ದರು ಇದರಿಂದ ಭೂಮಿಯ ತೇವಾಂಶ ಹೆಚ್ಚಾಗಿ ಮಳೆರಾಯನ ಆಗಮನವಾಗುತ್ತಿತ್ತು ಆದರೆ ಇಂದು ನಾವೆಲ್ಲ ಅಂತಹ ಕಾರ್ಯಗಳನ್ನು ಮಾಡದೇ ಇರುವಿದರಿಂದ ಭೂಮಿಯ ತೆವಾಂಶ ಕಡಿಮೆಯಾಗಿ ಮಳೆಗಳು ಆಗುತ್ತಿಲ್ಲ. ಕಾರಣ ನಾವು ಮಳೆ ನೀರು ಕೋಯ್ಲು ನಿರ್ಮಾಣ ಮಾಡುವುದು ಅತ್ಯವಶ್ಯಕವಾಗಿದೆ ಎಂದು 1ನೇ ವಾರ್ಡ ಸದಸ್ಯೆ ಪ್ರತಿಭಾ ಕಲ್ಲೂರ್ ಹೇಳಿದರು.

    ಪಟ್ಟಣದ ಇಲ್ಲಿಯ ವಾರ್ಡ್ ನಂಬರ್ 2 ಮೊಗಲಾಯಿ ಬಡಾವಣೆಯಲ್ಲಿ ಸೋಮವಾರ 15ನೇ ಹಣಕಾಸು ಯೋಜನೆಯಡಿ ರೂ. 7.80 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಪ್ರತಿ ಮನೆಯ ಮುಂದೆ ಸಣ್ಣ ಸಣ್ಣ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ನಿರ್ಮಾಣ ಮಾಡಿಕೊಳ್ಳುವದಿಂದ ದಿನಾಲು ಬಳಕೆ ಮಾಡುತ್ತಿರುವ ಬಟ್ಟೆ ತೊಳೆದ ನೀರು ಮತ್ತು ಬಾಂಡೆ ಸ್ವಚ್ಚ ಗೊಳಿಸಿದ ನೀರು ಒಂದೇ ಕಡೆ ಶೇಖರಣೆ ಆಗುವುದರಿಂದಲೂ ಕೂಡಾ ಭೂಮಿಯ ತೇವಾಂಶ ಹೆಚ್ಚಿಸುವುದರಿಂದ ಆಯಾ ಸಂದರ್ಭಕ್ಕೆ ತಕ್ಕಂತ ಮಳೆರಾಯನ ಆಗಮನಕ್ಕೆ ಸಹಕಾರಿಯಾಗುತ್ತದೆ ಎಂದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಹಿಂದಿನ ಕಾಲದಲ್ಲಿ ಮಳೆ ನೀರನ್ನು ತಗ್ಗು ಪ್ರದೇಶದಲ್ಲಿ ಕ್ರೂಡಿಕರಿಸುವದಾಗಲಿ ಅಥವಾ ಇಂಗು ಬಜ್ಜಲು ಮಾಡುವ ಮೂಲಕ ಭೂಮಿಯ ತೇವಾಂಶ ಹೆಚ್ಚುತ್ತಿದ್ದರು ಅದರಿಂದ ಕಾಲಕಾಲಕ್ಕೆ ಮಳೆಗಳು ಬರುತ್ತಿದ್ದರಿಂದ ಭೂಮಿಯಲ್ಲಿ ಅಂರ್ತಜಲ ಹೆಚ್ಚುತ್ತಿತ್ತು ಆದರೆ ಇಂದು ಎಲ್ಲೆಡೆ ಸಿಸಿ ಚರಂಡಿ, ಸಿಸಿ ರಸ್ತೆ ಮಾಡುತ್ತಿರುವುದರಿಂದ ಅಂರ್ತಜಲ ಕುಸಿಯುತ್ತಿದೆ ಕಾರಣ ಭೂಮಿಯ ತೇವಾಂಶ ಹೆಚ್ಚಿಸಲು ಪುರಸಭೆ ವತಿಯಿಂದ ಮಳೆ ನೀರಿನ ಕೊಯ್ಲು ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಪ್ರತಿ ವಾರ್ಡುಗಳಲ್ಲಿ ಈ ಘಟಕ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

       ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಹಾಸಿಂಪೀರ ಆಳಂದ, ಸದಸ್ಯರಾದ ರಾಜಣ್ಣ ನಾರಾಯಣಕರ್. ಬಸವರಾಜ ಯರನಾಳ, ಗೊಲ್ಲಾಳಪ್ಪಗೌಡ ಪಾಟೀಲ ಮಗಣಗೇರಿ, ಬಸವರಾಜ ಸಜ್ಜನ, ಮುಖ್ಯಾಧಿಕಾರಿ ಸುರೇಶ ನಾಯಕ, ಕಿರಿಯ ಅಭಿಯಂತರ ಅಜರ್ ನಾಟಿಕಾರ. ಶರಣಪ್ಪ ಸ್ವುಲ್ಪಿ. ಸತೀಶ್ ಗೌಡ ಬಿರಾದಾರ ಸೇರಿದಂತೆ ವಾರ್ಡಿನ ಜನರು ಉಪಸ್ಥಿತರಿದ್ದರು