ಉದ್ಯಾನವನ ನಿರ್ವಹಣೆಗೆ ಅನುವು ಮಾಡಿಕೊಡಲು ಮನವಿ

ದಾವಣಗೆರೆ.ನ.೧೨;  ನಗರದಲ್ಲಿ 224 ಅಧಿಕ ಉದ್ಯಾನವನಗಳಿವೆ ಆದರೆ ಕೆಲವಷ್ಟೇ ಉದ್ಯಾನವನಗಳು ಸುಸ್ಥಿತಿಯಲ್ಲಿ ಇವೆ.  ಕೆಲ ಸಂಘ-ಸಂಸ್ಥೆಗಳು ಕೆಲವೊಂದು ಉದ್ಯಾನವನವನ್ನು ಉಚಿತ ನಿರ್ವಹಣೆಯನ್ನು ಮಾಡುತ್ತಿದ್ದೇವೆ ಅಂತಹುದಲ್ಲಿ ಇಂದು ಮಹಾನಗರ ಪಾಲಿಕೆಯು ಇ, ಪ್ರೊಸಸ್ ಟೆಂಡರ್ ಮೂಲಕ ಉದ್ಯಾನವನವನ್ನು ಟೆಂಡರ್ ಕರೆದಿರುವುದು ಕಂಡುಬಂದಿರುತ್ತದೆ ಇದು ಸರಿಯಲ್ಲ ಎಂದು ಕರುನಾಡ ಕನ್ನಡ ಸಂಘ ಕೆ.ಟಿ ಗೋಪಾಲಗೌಡ ಹೇಳಿದ್ದಾರೆ.ಕೆಲವೊಂದು ಸಂಘ-ಸಂಸ್ಥೆಗಳು ಅದರಲ್ಲಿ ಕರುನಾಡ ಕನ್ನಡಸೇನೆ, ಪರಿಸರ ಸಂರಕ್ಷಣಾ ವೇದಿಕೆ, ಜನಸಾಮಾನ್ಯರ ವೇದಿಕೆ, ವಿಶ್ವಚೇತನ ಸಮಗ್ರ ಅಭಿವೃದ್ಧಿ ಸಂಸ್ಥೆ, ಸಾರ್ವಜನಿಕ ಅಭಿವೃದ್ಧಿ ಸಂಸ್ಥೆ, ಇನ್ನೂ ಅನೇಕ ಕನ್ನಡಪರ ಸಂಘಟನೆಗಳು ಉದ್ಯಾನವನವನ್ನು ಉಚಿತವಾಗಿ ನಿರ್ವಹಣೆ ಮಾಡಲು ಕೇಳಿದ್ದವು. ಸಂಘ ಸಂಸ್ಥೆಗಳಿಗೆ ಕೊಡುತ್ತೇವೆ ಎಂದು ಹೇಳಿ ಟೆಂಡರನ್ನು ಕರೆದಿರುತ್ತಾರೆ. ಸಾರ್ವಜನಿಕರ  ಲಕ್ಷಾಂತರ ಹಣವನ್ನು  ಪೋಲ್ ಮಾಡುತ್ತಿರುವುದು ಎಷ್ಟು ಸರಿ. ಹಿಂದೆ ನಾವು ಕನ್ನಡ ವನ ಎಂಬ ಉದ್ಯಾನವನವನ್ನು ನಿರ್ಮಾಣ ಮಾಡಿ ನಿರ್ವಹಣೆಯನ್ನು ಮಾಡಿ ಮಹಾನಗರಪಾಲಿಕೆಗೆ 25 ಲಕ್ಷಕ್ಕೂ ಅಧಿಕ ಹಣವನ್ನು ಉಳಿಸಿದ್ದೇವೆ. ಇವರು ಈ ರೀತಿ ಮಾಡುವುದನ್ನು ನೋಡಿದರೆ ಹಣ ಮಾಡಲು ಹೊರಟಿದ್ದಾರೆ ಎಂದು ಜನರು ಅನುಮಾನ ಪಡುತಿದ್ದಾರೆ. ಕೂಡಲೇ ಈ ಟೆಂಡರ್ ಅನ್ನು ಸ್ಥಗಿತ ಗೊಳಿಸಿ ಸಂಘ-ಸಂಸ್ಥೆಗಳನ್ನು ಕರೆದು ಉದ್ಯಾನವನವನ್ನು ಉಚಿತ ನಿರ್ವಹಣೆ ಮಾಡಲು ಮನವಿ ಮಾಡಿದ್ದಾರೆ.