ಉದ್ಯಾನವನ ಒತ್ತುವರಿ : ಮಠ ತೆರವುಗೊಳಿಸಲು ಒತ್ತಾಯ

ಲಿಂಗಸುಗೂರು.ಏ.೨೦-ಪುರಸಭೆ ವ್ಯಾಪ್ತಿಯ ೭ನೇ ವಾರ್ಡಿನ ರಾಯಚೂರಿನ ರಸ್ತೆಗೆ ಹೊಂದಿಕೊಂಡಿರುವ ಉದ್ಯಾನವನ ಜಾಗವನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ ಶಾಂಭವಿ ಮಠವನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ಮಾದಿಗ ದಂಡೋರದ ರಾಜ್ಯ ಖಜಾಂಚಿ ಶರಣಬಸವ ಗಿಬ್ಸ್‌ರವರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಉದ್ಯಾನವನ ಜಾಗೆಗಳನ್ನು ಒತ್ತುವರಿ ತೆರವುಗೊಳಿಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ಮಾಡಿದ್ದು, ಆದರೆ ಈ ಆದೇಶ ಪಾಲನೆಗೆ ಮಾಡುವಲ್ಲಿ ಪುರಸಭೆ ವಿಫಲವಾಗಿದೆ.
ಇದೇ ಏ. ೦೮ರಂದು ಪುರಸಭೆ ಮುಖ್ಯಾಧಿಕಾರಿಗಳು ಶಾಂಭವಿ ಮಠಕ್ಕೆ ಸಿಬ್ಬಂದಿ, ಇಬ್ಬರು ಪೊಲೀಸರೊಂದಿಗೆ ಹಾಗೂ ತೆರಳಿ ಮಠ ಕಟ್ಟಡ ನಿರ್ಮಾಣ ವೇಳೆಯಲ್ಲಿ ಉಳಿದಿದ್ದ ಸಿಮೆಂಟ್ ಎಳ್ಳಿಗಳನ್ನು ತೆಗೆದು ಹಾಕಿದಂತೆ ಮಾಡಿ ಅದರ ಫೋಟೋಗಳು ತೆಗೆದುಕೊಂಡಿದ್ದು ಮಠದ ಕಟ್ಟಡ ತೆರವುಗೊಳಿಸಿಲ್ಲ ಇದು ಸರ್ವೋಚ್ಛ ನ್ಯಾಯಲಯದ ಆದೇಶ ಉಲ್ಲಂಘನೆ ಮಾಡಿದ್ದಾರೆ. ಕೂಡಲೇ ನ್ಯಾಯಾಲಯದ ಆದೇಶ ಪಾಲನೆ ಮಾಡಿ ಕಟ್ಟಡ ತೆರವುಗೊಳಿಸುವಂತೆ ಆಗ್ರಹಿಸಿದರು.