ಉದ್ಯಾನವನ ಅತಿಕ್ರಮ: ಕ್ರಮಕ್ಕೆ ಒತ್ತಾಯ

ರಾಯಚೂರು.ಜೂ.೦೩-ವಾಸವಿಪೂರ ಬಡಾವಣೆಯ ಸರ್ವೇ ನಂ ೮೬೬/೧ ರಲ್ಲಿ ಕಾಯ್ದೆರಿಸಿದ ಉದ್ಯಾನವನವನ್ನು ಅತಿಕ್ರಮ ಮಾಡಿ ಕಾಂಪೌಂಡ್ ಕಟ್ಟುತ್ತಿರುವುದನ್ನು ಹಾಗೂ ಗಿಡಮರಗಳನ್ನು ಕಡಿಯುವುದನ್ನು ಕೂಡಲೇ ಪಡೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ( ಸ್ವಾಭಿಮಾನ ಬಣ) ಮುಖಂಡರು ನೇತಾಜಿ ಠಾಣೆಯ ಪಿಎಸ್‌ಐ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಾಸವಿಪೂರ ಬಡಾವಣೆಯ ಸರ್ವೇ ನಂ ೮೬೬/೧ ರಲ್ಲಿ ಕಾಯ್ದೆರಿಸಿದ ಉದ್ಯಾನವನ ಸಂಖ್ಯೆ ೭-೬-೧೯ ಹಾಗೂ ೭-೬-೧೫ ರಲ್ಲಿ ಕಾರ್ತಿಕಯ್ಯತಂದೆ ವೀರಭದ್ರಪ್ಪ ಹಾಗೂ ಇವರ ಸಹೋದರರು ಯಾವುದೇ ಪರವಾನಿಗೆ ಮತ್ತು ದಾಖಲೆಗಳಿಲ್ಲದೆ ಅತಿಕ್ರಮ ಮಾಡಿ ಕಾಂಪೌಂಡ್ ಕಟ್ಟಿದ್ದಾರೆ. ಸುಮಾರು ೩೦, ೪೦ ವರ್ಷಗಳಿಂದ ಉದ್ಯಾನವನದಲ್ಲಿ ಹೆಮ್ಮರವಾಗಿ ಬೆಳೆದ ಗಿಡ ಮರಗಳನ್ನು ಕಡಿಯಲು ಬಂದಿದ್ದಾರೆ.
ನಗರಸಭೆ ಹಾಗೂ ನಗರಾಭಿವೃದ್ದಿ ದಾಖಲೆಗಳ ಪ್ರಕಾರ ಸದರಿ ಸ್ಥಳವು ಉದ್ಯಾನವನವೆಂದು ಪರಿಗಣಿಸಲಾಗಿದೆ.
ಉದ್ಯಾನವನದಲ್ಲಿ ಕಟ್ಟುವ ಕಾಂಪೌಂಡ್ ಕಾಮಗಾರಿ ಹಾಗೂ ಗಿಡಮರಗಳನ್ನು ಕಡೆಯುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಖಲೀಲ್ ಪಾಷ ಸೇರಿದಂತೆ ಇತರರು ಉಪಸ್ಥಿತರಿದ್ದರು.