ಉದ್ಯಾನವನ ಅತಿಕ್ರಮ: ಕಾಮಗಾರಿ ನಿಲ್ಲಿಸಲು ಆಗ್ರಹ

ರಾಯಚೂರು, ಜೂ.೨- ವಾಸವಿಪುರ ಬಡಾವಣೆಯ ಸರ್ವೇ ನಂ ೮೬೬/೧ ರಲ್ಲಿ ಕಾಯ್ದಿರಿಸಿದ ಉದ್ಯಾನವನವನ್ನು ಅತಿಕ್ರಮ ಮಾಡಿ ಕಾಂಪೌಂಡ್ ಕಟ್ಟುತಿರುವುದನ್ನು ತಡೆಯಬೇಕೆಂದು ರಾಮ್ ಸೇನಾ ಕರ್ನಾಟಕ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಾಸವಿಪುರ ಬಡಾವಣೆಯ ಸರ್ವೇ ನಂ ೮೬೬/೧ ರಲ್ಲಿ ಕಾಯ್ದಿರಿಸಿದ ಉದ್ಯಾನವನದ ಸಂಖ್ಯೆ ೭-೬-೧೯ ಹಾಗೂ ೭-೬-೧೫ ರಲ್ಲಿ ಇಂದು ಕಾರ್ತಿಕೇಯ ಅಂತರ ಗಂಗಿ ಹಾಗೂ ವೀರಭದ್ರಪ್ಪ ಬೆಸ್ತ ವಾರಪೇಟೆ ಹಾಗೂ ಇವರ ಅಣ್ಣ ತಮ್ಮಂದಿರು ಯಾವುದೇ ಪರವಾನಿಗೆ ದಾಖಲೆಗಳು ಇಲ್ಲದೆ ಅತಿಕ್ರಮ ಮಾಡಿ ಕಾಂಪೌಂಡ್ ಕಟ್ಟುತ್ತಿದ್ದಾರೆ ಎಂದು ದೂರಿದರು.
ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರವರ ದಾಖಲೆಗಳ ಪ್ರಕಾರ ಸದರಿ ಜಾಗವು ಉದ್ಯಾನವನ ಎಂದು ದಾಖಲೆಯಲ್ಲಿದೆ. ಆದ್ದರಿಂದ ಕೂಡಲೇ ಉದ್ಯಾನವನದಲ್ಲಿ ಕಾಂಪೌಂಡ್ ಕಟ್ಟುತ್ತಿರುವ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.