ಉದ್ಯಾನವನಗಳಲ್ಲಿ ಉದಯರಾಗ


ಗದಗ, ಜು.17: ಉದ್ಯಾನವನಗಳಲ್ಲಿ ಉದಯರಾಗ ಕಾರ್ಯಕ್ರಮವು ರವಿವಾರ ಬೆಳಗ್ಗೆ 6.30 ರಿಂದ 7.30ರ ವರೆಗೆ ನಗರದ ರಾಜೀವಗಾಂಧೀ ನಗರದ ಶಿವಶರಣ ಹರಳಯ್ಯ ಉದ್ಯಾನವನ, ವಿಶ್ವೇಶ್ವರಯ್ಯ ನಗರದ ವಿಶ್ವೇಶ್ವರಯ್ಯ ಉದ್ಯಾನವನ ಹಾಗೂ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಜರುಗಿತು.
ಶಿವಶರಣ ಹರಳಯ್ಯ ಉದ್ಯಾನವನದಲ್ಲಿ ಶಿವಲಿಂಗಯ್ಯ ಹಿರೇಮಠ ಹೊನ್ನಿಗನೂರ ಅವರಿಂದ ಸುಗಮ ಸಂಗೀತ, ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ವೀರಣ್ಣ ಅಂಗಡಿ ಅವರಿಂದ ಜಾನಪದ ಸಂಗೀತ ಹಾಗೂ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಮಲ್ಲಿಕಾರ್ಜುನ ಹೂಗಾರ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.