ಉದ್ಯಾನವನಗಳಲ್ಲಿ ಉದಯರಾಗ ಸಂಗೀತ ಕಾರ್ಯಕ್ರಮ

ಗದಗ,ಜೂ.26: ಜೂ25: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ-ಬೆಟಗೇರಿ ನಗರಸಭೆ ಸಹಯೋಗದಲ್ಲಿ ಉದ್ಯಾನವನಗಳಲ್ಲಿ ಉದಯರಾಗ ಸಂಗೀತ ಕಾರ್ಯಕ್ರಮವನ್ನು ರವಿವಾರ ಮುಂಜಾನೆ ಗದಗ ನಗರದ ವಿಶ್ವೇಶ್ವರಯ್ಯ ನಗರದ ವಿಶ್ವೇಶ್ವರಯ್ಯ ಉದ್ಯಾನದಲ್ಲಿ ಏರ್ಪಡಿಸಲಾಗಿತ್ತು.
ಉದಯರಾಗ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಹಿರೇಮಠ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗದಗ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಉದಯರಾಗ-ಸಂಧ್ಯಾರಾಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಉದ್ಯಾನವನಗಳಲ್ಲಿ ಬೆಳಗ್ಗೆ ವಾಯುವಿಹಾರಕ್ಕೆ ಆಗಮಿಸುವ ಯುವಕರಿಗೆ, ವೃದ್ಧರಿಗೆ ವಾಯು ವಿಹಾರದೊಂದಿಗೆ ಸಂಗೀತ ರಸದೌತಣವನ್ನು ಉಣಬಡಿಸುವ ಮೂಲಕ ಮನಸ್ಸನ್ನು ರಂಜಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ವಾರ್ತಾಧಿಕಾರಿ ವಸಂತ ಮಡ್ಲೂರ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರ ಇಚ್ಛಾಶಕ್ತಿಯ ಮೇರೆಗೆ ಉದಯರಾಗ-ಸಂಧ್ಯಾರಾಗ ವಿಭಿನ್ನ ಕಾರ್ಯಕ್ರಮಗಳನ್ನು ಅವಳಿ ನಗರದಲ್ಲಿ ಪುನರ ಆರಂಭಿಸಲಾಗಿದೆ. ಮುಂಜಾನೆ ಹಾಗೂ ಸಾಯಂಕಾಲ ಉದ್ಯಾನವನಗಳಲ್ಲಿ ವಾಯು ವಿಹಾರಕ್ಕೆ ಆಗಮಿಸುವ ಜನ ಸಾಮಾನ್ಯರಿಗೆ ಸಂಗೀತದ ಮೂಲಕ ಮನಸ್ಸನ್ನು ಉಲ್ಲಾಸಕರವಾಗಿಸಲು, ಹಾಗೂ ಸದಾ ಲವಲವಿಕೆಯಿಂದರಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಎಲೆ ಮರೆಯಲ್ಲಿರುವ ಮಹಾನ ಕಲಾವಿದರನ್ನು ಗುರುತಿಸಿ ವೇದಿಕೆ ನೀಡುವ ಮೂಲಕ ಅವರಲ್ಲಿನ ಪ್ರತಿಭೆಯನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಕಲಾವಿದರ ಕಲೆಯನ್ನು ಗುರುತಿಸಿ ಪೆÇ್ರತ್ಸಾಹಿಸುವ ಮೂಲಕ ಅವರನ್ನು ಉನ್ನತ ಮಟ್ಟದ ಕಲಾವಿದರನ್ನಾಗಿಸುವ ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ. ಹಾಗೂ ಬಡ ಕಲಾವಿದರಿಗೆ ಆರ್ಥಿಕವಾಗಿ ಸಬಲೀಕರಣಕ್ಕಾಗಿ ಉದಯರಾಗ-ಸಂಧ್ಯಾರಾಗ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಘ್ನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರವಿ ಇನಾಮತಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಬೊಮ್ಮನಹಳ್ಳಿ, ಪೆÇ್ರ.ಲಿಂಗಾರೆಡ್ಡಿ, ಪೆÇ್ರೀ.ಹುಲ್ಲೂರ, ಆಂಜನೇಯ ಕಟಗಿ, ರವಿ ಬೆಂತೂರ, ಸತೀಶ, ಸಂದೇಶ ಪಾಟೀಲ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಜೈ ಶ್ರೀರಾಮ ವಾಯು ವಿಹಾರ ಸಂಘದ ಸದಸ್ಯರು, ಗಣ್ಯರು ಹಾಜರಿದ್ದರು.
ಮುಂಜಾನೆ 6.30 ರಿಂದ 7.30ರ ವರೆಗೆ ಜರುಗಿದ ಉದಯರಾಗ ಕಾರ್ಯಕ್ರಮಗಳಲ್ಲಿ ರಾಜೀವ ಗಾಂಧೀನಗರದ ಶಿವಶರಣ ಶ್ರೀ ಹರಳಯ್ಯ ಉದ್ಯಾನವನದಲ್ಲಿ ವಿರೇಶ ಕಿತ್ತೂರ ಅವರಿಂದ ವಚನ ಸಂಗೀತ, ವಿಶ್ವೇಶ್ವರಯ್ಯ ನಗರದ ವಿಶ್ವೇಶ್ವರಯ್ಯ ಉದ್ಯಾನದಲ್ಲಿ ವೆಂಕಟೇಶ ಕುಲಕರ್ಣಿ ಅವರಿಂದ ಶಾಸ್ತ್ರೀಯ ಸಂಗೀತ, ಬೆಟಗೇರಿಯ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಶ್ರೀಮತಿ ಶೋಭಾ ಗಿರೀಶ ಬಡಿಗೇರ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಮೂಡಿ ಬಂದವು.