ಉದ್ಯಾನದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಖಂಡನೀಯ

ಔರಾದ : ನ.10:ಪಟ್ಟಣದ ವಾರ್ಡ ಸಂ.14 ಶಿಕ್ಷಕರ ಬಡಾವಣೆಯಲ್ಲಿ ಮಕ್ಕಳು ಆಟವಾಡುವ ಹಾಗೂ ಹಿರಿಯರು ವಿಶ್ರಾಂತಿ ಮಾಡುವ ಉದ್ಯಾವನದಲ್ಲಿ ಅಂಗನವಾಡಿ ಕಟ್ಟಡ ಕಟ್ಟುತ್ತಿರುವದು ಖಂಡನಿಯವಾಗಿದೆ .

ಈಗಾಗಲೇ ಕಾಮಗಾರಿಯು ನಿಲ್ಲಿಸುವಂತೆ ಬಡಾವಣೆ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಕೂಡ ಕಾಮಗಾರಿ ಪ್ರಾರಂಭಿಸಿರುವದು ಸೂಕ್ತವಲ್ಲ. ಪಕ್ಕದಲ್ಲಿಯೆ ಸರ್ಕಾರದ ಜಾಗವಿದ್ದರು ಮಕ್ಕಳು ಆಡುವ ಉದ್ಯಾನವನದಲ್ಲಿರುವ ಕಟ್ಟಡ ಕಟ್ಟುತ್ತಿರುವದು ಖಂಡನೀಯ ಎಂದು ಬಡಾವಣೆ ಜನರಿಗೆ ಬೇಸರ ವ್ಯಕ್ತಪಡಿಸಿದರು.ಸಂಭಂದ ಪಟ್ಟ ಇಲಾಖೆಯವರು ಹಣದ ಆಸೆಯಿಂದ ಇಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ ಹಾಗೂ ಅರಣ್ಯ ಇಲಾಖೆಯ ಪರವಾನಿಗೆ ಇಲ್ಲದೆ ಬ್ರಹತ್ತಮಟ್ಟದ ಗಿಡ ಮರಗಳನ್ನು ಕಡಿದಿರುತ್ತಾರೆ ಸಂಭಂದ ಪಟ್ಟ ಗುತ್ತಿಗೆದಾರನ ಹಾಗೂ ಇಲಾಖೆಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಡಾವಣೆ ನಿವಾಸಿ ಶಂಕರ ರೆಡ್ಡಿ ಅವರು ಆಗ್ರಹಿಸಿದರು.

ಬಡಾವಣೆಯ ಜನರ ಬೇಡಿಕೆಯಂತೆ ಸರ್ಕಾರದ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ ನಮ್ಮ ಬೆಂಬಲ ವಿರುತ್ತೆ ಉದ್ಯಾನದಲ್ಲಿ ನಿರ್ಮಿಸುತ್ತಿರುವದು ಸೂಕ್ತವಲ್ಲ ಎಂದು ಬಡಾವಣೆ ನಿವಾಸಿಗಳಾದ ಮುರಳಿಧರ, ವೈಜಿನಾಥ ಕಿಸವೆ, ಉದ್ದವರಾವ ನೇಳಗೆ,ಸೂರ್ಯಕಾಂತ ಜಾಧವ,ಶಿವರಾಜ ಬೀರಾದಾರ, ಮಹೆಮುದ್ದ ಚೌದ್ರ,ಜ ಗನಾಥ ಹೂಗಾರ, ಗಣಪತಿ ಕಾಡಗೆ, ಉಮಾಕಾಂತ ಕಾಡಿಗ , ರವಿ ಸ್ವಾಮಿ, ಪಟ್ಟಣ ಪಂಚಾಯ್ತಿ, ಅರಣ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.