ಉದ್ಯಮ ನಿಷ್ಠೆ ಕೌಶಲ್ಯ ರೂಪಿಸಲು ಜಿಟಿಟಿಸಿ ಹಾಗೂ ಟೊಯೋಟಾ ಒಪ್ಪಂದ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೨೭; ಆಟೋಮೊಬೈಲ್ ವೆಲ್ಡಿಂಗ್ ಮತ್ತು ಆಟೋಮೊಬೈಲ್ ಅಸೆಂಬ್ಲಿ ಟ್ರೇಡ್‍ಗಳಲ್ಲಿ ಮೂರು ವರ್ಷಗಳ ತರಬೇತಿಯಲ್ಲಿ ನೋಂದಾಯಿಸಿಕೊಂಡಿರುವ ತರಬೇತಿದಾರರಿಗೆ ಉದ್ಯಮ ನಿಷ್ಠ ಕೌಶಲ್ಯ ತರಬೇತಿ ನೀಡಲು ಜಿಟಿಟಿಸಿ  (ಸರ್ಕಾರಿ ಉಪಕರಣಗಾರ ಮತ್ತ ತರಬೇತಿ ಕೇಂದ್ರ) ಹಾಗೂ ಟೊಯೋಟಾ (ಟೊಯೋಟಾ ಕಿರ್ಲೋಸ್ಕರ್ ಮೋಟಾರ್) ಒಪ್ಪಂದ ಮಾಡಿಕೊಂಡಿವೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ 30 ಜಿಟಿಟಿಸಿ ಸಂಸ್ಥೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು.ಟಿಕೆಎಂ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಿ.ಶಂಕರ ನೇತೃತ್ವದ ತಂಡ  ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಜಿಟಿಟಿಸಿ ಕೇಂದ್ರ ಭೇಟಿ ನೀಡಿ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ರಾಘವೇಂದ್ರ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.ಒಪ್ಪಂದ ಅನ್ವಯ ನುರಿತ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸಲು ಜಿಟಿಟಿಸಿ, ಟೊಯೊಟಾ ಸಂಸ್ಥೆಯನ್ನು ಕೈಗಾರಿಕಾ ತರಬೇತಿ ಪೂರೈಕೆದಾರ (ಐಟಿಪಿ) ಸಂಸ್ಥೆ ಎಂದು ಗುರುತಿಸಿದೆ. 2021-22ರಲ್ಲಿ ನಾಲ್ಕು ಜಿಟಿಟಿಸಿ ಸಂಸ್ಥೆಗಳ ಜೊತೆಗಿನ ಒಪ್ಪಂದದೊಂದಿಗೆ ಪ್ರಾರಂಭವಾದ ಟಿಕೆಎಂ ಇಲ್ಲಿಯವರೆಗೆ ಹನ್ನೊಂದು ಜಿಟಿಟಿಸಿ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದೆ.2023-24ರ ಹಣಕಾಸು ವರ್ಷದಲ್ಲಿ, ವಾಹನ ಉದ್ಯಮ ಸಂಸ್ಕøತಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಟಿಕೆಎಂ ಇನ್ನೂ ಐದು ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಎಲ್ಲಾ ತರಬೇತಿ ಕಾರ್ಯಕ್ರಮದ ಭಾಗವಾಗಿ, ಟೊಯೊಟಾ ಉತ್ಪಾದನಾ ವ್ಯವಸ್ಥೆಯಲ್ಲಿ ವ್ಯಾಪಕ ಅನುಭವ ಹೊಂದಿರುವ ಟೊಯೊಟಾ ವೃತ್ತಿಪರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ದೆಹಲಿಯ ಆಟೋಮೋಟಿವ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ ಜೊತೆಗೂಡಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರಕ್ಕಾಗಿ ಪರೀಕ್ಷೆ ನಡೆಯಲಿದೆ.ಈ ಸಂದರ್ಭದಲ್ಲಿ ಮಾತನಾಡಿದ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ರಾಘವೇಂದ್ರ ಜಿ.ಟಿ.ಟಿ.ಸಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯಮ ನಿಷ್ಠ ಕೌಶಲ್ಯ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಟಿಕೆಎಂ ಕಂಪನಿ ‘ಕಲಿಯಿರಿ ಮತ್ತು ಸಂಪಾದಿಸಿ’ ವಿಧಾನದ ಮೂಲಕ ತರಬೇತಿದಾರರಿಗೆ ಉದ್ಯೋಗ ಸಾಮಥ್ರ್ಯವನ್ನು ಸುಧಾರಿಸಲು ಅವಕಾಶವನ್ನು ಒದಗಿಸಲಿದೆ. ಸಂಸ್ಥೆಗಳಲ್ಲಿ ಉದ್ಯಮ-ನಿರ್ದಿಷ್ಟ ಕೌಶಲ್ಯ, ಜ್ಞಾನ ಮತ್ತು ಸಂಸ್ಕøತಿಯ ಅಭಿವೃದ್ಧಿಗೆ ಟಿಕೆಎಂ ಪೂರ್ವಭಾವಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಸಹಯೋಗದ ಪ್ರಯತ್ನಗಳ ಮೂಲಕ, ನಾವು ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.ಟಿಕೆಎಂ ಹಿರಿಯ ಅಧಿಕಾರಿ ಜಿ.ಶಂಕರ ಮಾತನಾಡಿ ಅಸಾಧಾರಣ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸುವ ಕೇಂದ್ರದಲ್ಲಿ ವಿಶ್ವದರ್ಜೆಯ ವ್ಯಕ್ತಿಗಳನ್ನು ಪೆÇೀಷಿಸಲು ಸಂಸ್ಥೆ ಬದ್ಧವಾಗಿದೆ. ಜಿಟಿಟಿಸಿಯೊಂದಿಗಿನ ಸಹಯೋಗ ಮತ್ತು ಪ್ರಾರಂಭಿಸಿದ ಚಟುವಟಿಕೆಗಳು ಭಾರತೀಯ ಆಟೋ ಉದ್ಯಮದ ಬೆಳವಣಿಗೆಯನ್ನು ಮುನ್ನಡೆಸುವ ನುರಿತ ಮತ್ತು ಸುರಕ್ಷತಾ-ಪ್ರಜ್ಞೆಯ ಕಾರ್ಯಪಡೆಯನ್ನು ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.ಕರ್ನಾಟಕ ಸರ್ಕಾರದ ಕಾರ್ಖಾನೆಗಳು, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶಕ ಕೆ.ಶ್ರೀನಿವಾಸ್ ಅವರು ಮಾತನಾಡಿ, ಸ್ಕಿಲ್ ಇಂಡಿಯಾ ಮಿಷನ್‍ನ ಉದ್ದೇಶಗಳನ್ನು ಮುಂದುವರಿಸಲು ಮತ್ತು ಉದ್ಯಮದಲ್ಲಿ ಸುರಕ್ಷಿತ ಮನಸ್ಥಿತಿಯೊಂದಿಗೆ ಕೆಲಸ ಮಾಡಲು ವಿದ್ಯಾರ್ಥಿಗಳಲ್ಲಿ ಸುರಕ್ಷತೆಯ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಟಿಕೆಎಂ ಅಮೂಲ್ಯ ಬೆಂಬಲ ನೀಡುತ್ತಿದೆ. ಸಾಮೂಹಿಕ ಪ್ರಯತ್ನ ಮತ್ತು ಸಹಯೋಗದೊಂದಿಗೆ, ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಉದ್ಯಮದ ಅವಶ್ಯಕತೆಗಳನ್ನು ಪೂರೈಸಲು ಹಾಗೂ ಸುರಕ್ಷಿತ ಉದ್ಯಮ ಸಂಸ್ಕøತಿಯನ್ನು ಬೆಳೆಸಲಾಗುವುದು ಎಂದರು.