ಉದ್ಯಮಿ ರಾಮಸಿಂಗ ರಜಪೂತರಿಗೆ ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ರಂಗನಾಥ ಶರ್ಮಾ ಪ್ರಶಸ್ತಿ

ವಿಜಯಪುರ, ಜು.21-ವಿದ್ವಾನ್ ರಂಗನಾಥ ಶರ್ಮ ಪ್ರತಿಷ್ಠಾನ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ) ಕರ್ನಾಟಕ ಜಂಟಿಯಾಗಿ ಸಂಸ್ಕøತ ಸಾಹಿತ್ಯದ ಸಾಧಕರಿಗೆ ಪ್ರತಿವರ್ಷ ಕೊಡಮಾಡಲಾಗುವ ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ರಂಗನಾಥ ಶರ್ಮಾ ಪ್ರಶಸ್ತಿ 2022 ನೇ ವರ್ಷದ ಪ್ರಶಸ್ತಿಗೆ ವಿಜಯಪುರದ ಉದ್ಯಮಿ ರಾಮಸಿಂಗ್ ರಜಪೂತ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ದಿನಾಂಕ 24-07-2022 ರಂದು ಮಧ್ಯಾಹ್ನ 4 ಗಂಟೆಗೆ ನಗರದ ಶ್ರೀಕೃಷ್ಣ ಮಠದ ಸಭಾಂಗಣದಲ್ಲಿ ಜರುಗಲಿದೆ.
ವಿಜಯಪುರದ ಖ್ಯಾತ ಸಂಸ್ಕೃತ ವಿದ್ವಾಂಸರಾದ ‘ಪಂಡಿತ ಸಂಜೀವಾಚಾರ್ಯ ಮಧಬಾವಿ’ ಪ್ರಶಸ್ತಿ ಪ್ರದಾನ ಮಾಡಿ “ಸಂಸ್ಕೃತ ಸಾಹಿತ್ಯದಲ್ಲಿ ಶಿಕ್ಷಣ” ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರಸ್ತಾವನೆ ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂಧನ ಭಟ್ ಮಾಡಲಿದ್ದು , ಅಭಾಸಾಪ ರಾಜ್ಯ ಉಪಾಧ್ಯಕ್ಷರಾದ ಎಸ್.ಜಿ ಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಂದು ಅಭಾಸಾಪ ವಿಜಯಪುರ ವಿಭಾಗ ಸಂಯೋಜಕ ಶ್ರೀಶ್ ಹುಟಗಿ ಹಾಗೂ ವಿಜಯಪುರ ಜಿಲ್ಲಾ ಸಂಯೋಜಕ ಶ್ರೀರಂಗ ಪುರಾಣಿಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.