ಉದ್ಯಮಿ ಪುತ್ರನ ಬರ್ಬರ ಹತ್ಯೆ

ಮೈಸೂರು:- ಮೈಸೂರಿನ ಉದ್ಯಮಿಯೊಬ್ಬರ ಪುತ್ರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೆನ್ ಇಂಜಿನಿಯರಿಂಗ್ ವಕ್ರ್ಸ್ ಮಾಲೀಕ ಕೆ.ಎಂ. ಚೆರಿಯನ್ ಅವರ ಪುತ್ರ ಕ್ರಿಸ್ಟೋ ಚೆರಿಯನ್ (34) ಹತ್ಯೆಯಾದ ಯುವಕ.
ಕ್ರಿಸ್ಟೋ ಚೆರಿಯನ್ ಅವರನ್ನು ಹತ್ಯೆ ಮಾಡಿದ ಬಳಿಕ ವಿಜಯನಗರ ಮೊದಲ ಹಂತದಲ್ಲಿರುವ ವಾಟರ್ ಟ್ಯಾಂಕ್ ಸಮೀಪದ ಹಳ್ಳದಲ್ಲಿ ಶವವನ್ನು ಬಿಸಾಡಲಾಗಿದೆ.
ವಿಜಯನಗರ ಮೊದಲ ಹಂತದ ನಿವಾಸಿಯಾಗಿರುವ ಚೆರಿಯನ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲವಾಗಿದೆ.
ಸಂಜೆ ಸಾರ್ವಜನಿಕರು ಆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಕುರಿತು ವಿಜಯನಗರ ಠಾಣೆ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
ಶವವನ್ನು ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ.