ಉದ್ಯಮಿ ದಣ್ಣೂರ್ ಮೇಲೆ ಗುಂಡಿನ ದಾಳಿ: ಗುತ್ತೇದಾರ್ ಸೇರಿ ಹತ್ತಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ,ಜ 8: ನಗರದ ಹೊರವಲಯದ ಆಳಂದ್ ರಸ್ತೆಯಲ್ಲಿರುವ ಚೆಕ್‍ಪೋಸ್ಟ್ ಬಳಿ ಕಳೆದ ಶನಿವಾರ ಮಧ್ಯಾಹ್ನ ಉದ್ಯಮಿ ಚೆನ್ನು ಪಾಟೀಲ್ ದಣ್ಣೂರ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸಯ್ಯ ಗುತ್ತೇದಾರ್ ಸೇರಿ ಹತ್ತಕ್ಕೂ ಅಧಿಕ ಜನರ ವಿರುದ್ಧ ಸಬ್- ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸಯ್ಯ ಗುತ್ತೇದಾರ್, ದಸ್ತಯ್ಯ ಗುತ್ತೇದಾರ್, ರಾಜು, ಶಾಂತಿಬಾಯಿ ಮುಂತಾದವರ ವಿರುದ್ಧವೂ ದೂರು ದಾಖಲಾಗಿದೆ. ಜೈಭವಾನಿ ಮರಾಠಾ ಖಾನಾವಳಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀಪು ಚನ್ನು ಪಾಟೀಲ್ ದಣ್ಣೂರ್ ಅವರ ಪರವಾಗಿ ಬಂದಿದ್ದೇ ಗುಂಡಿನ ದಾಳಿಗೆ ಕಾರಣ ಎನ್ನಲಾಗಿದೆ. ಇದರಿಂದಾಗಿ ಚನ್ನು ಪಾಟೀಲ್ ದಣ್ಣೂರ್ ಅವರ ಕೈಗೆ ಹಾಗೂ ಆ ಸ್ಥಳದಲ್ಲಿದ್ದ ಅಬೂಬಕರ್ ಎಂಬುವವರ ಕಾಲಿಗೂ ಗುಂಡು ಹೊಕ್ಕು ಗಾಯಗೊಂಡಿದ್ದರು. ದುಷ್ಕರ್ಮಿಗಳು ಬುಲೆರೋ ವಾಹನದಲ್ಲಿ ಬಂದು ಗುಂಡಿನ ದಾಳಿ ಮಾಡಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸಬ್- ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.