ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ ಉದ್ಘಾಟನೆ

ಬಾದಾಮಿ,ಜೂ10: ಭಾರತೀಯ ವೈದ್ಯ ಪದ್ಧತಿಗಳ ರಾಷ್ಟ್ರೀಯಆಯೋಗ ನವದೆಹಲಿ ಹಾಗೂ ರಾಷ್ಟ್ರೀಯ ಸಂಸ್ಥಾನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹೈದರಾಬಾದ ಇವರ ಪ್ರಾಯೋಜಕತ್ವದಡಿ ನಗರದ ಶ್ರೀ ವೀರಪುಲಿಕೇಶಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಎಂಟರ್‍ಪ್ರೆನರ್‍ಶಿಪ್ ಡೆವಲಪ್‍ಮೆಂಟ್ ಸೆಲ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಶಿಕ್ಷಕಿ ಪಾರ್ವತಿದೇವಿ ಮಗದುಮ್ ಉದ್ಘಾಟಿಸಿ ಮಾತನಾಡಿ, ಈ ಮಹಾವಿದ್ಯಾಲಯದಿಂದ ಅನೇಕರಿಗೆ ಉದ್ಯೋಗಗಳು ದೊರೆಯುವಂತಾಗಲಿ ಎಂದು ಆಶಿಸಿದರು. ಸಭೆಯ ಅಧ್ಯಕ್ಷತೆಯನ್ನು ಅಕಾಡೆಮಿಕ್ ಡೀನ ಡಾ.ಶಶಿಕಾಂತ ನಿಡಗುಂದಿ ವಹಿಸಿದ್ದರು. ಎಂಟರ್‍ಪ್ರೆನರ್‍ಶಿಪ್ ಡೆವಲಪ್‍ಮೆಂಟ್ ಸೆಲ್ ಕುರಿತು ಡಾ.ಗಿರೀಶ ದಾನಪ್ಪಗೌಡರ ಮಾತನಾಡಿದರು. ಮಹಾವಿದ್ಯಾಲಯದಎಲ್ಲ ಶಿಕ್ಷಕರು, ಗೃಹವೈದ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.