ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ

ಧಾರವಾಡ, ನ.19: ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಹಾಗೂ ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಮಹಿಳಾ ಪ್ರಥಮ ಧರ್ಜೆ ಕಾಲೇಜು ಇವರುಗಳ ಸಹಯೋಗದಲ್ಲಿ 3 ದಿನಗಳ ಉದ್ಯಮಶೀಲಾತಾಭಿವೃದ್ದಿ ತಿಳುವಳಿಕೆ ಕಾರ್ಯಕ್ರಮವನ್ನು ಧಾರವಾಡದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಿಸಲಾಯಿತು.

ಕಾರ್ಯಕ್ರಮವನ್ನು ಸಿಡಾಕ್ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಎಮ್.ಗೋಟುರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಸ್ವ-ಉದ್ಯೋಗ ಮತ್ತು ಸ್ವಾವಲಂಭನೆಯ ಕುರಿತು ಇಂದಿನ ದಿನಗಳಲ್ಲಿ ಕೌಶಲ್ಯದ ಮಹತ್ವ ಮತ್ತು ಅದರಿಂದಾಗುವ ಲಾಭದ ಬಗ್ಗೆ ಚರ್ಚಿಸಿದರು. ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ ಎಚ್. ಅಂಗಡಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೆ.ಜೆ.ಐ.ಡಿ ವಿಮಾ ವಿಭಾಗದ ಅಧಿಕಾರಿ ಜಗನ್ನಥರಾವ್ ಕಠಾರೆ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಎಸ್.ಎಸ್. ಅಂಗಡಿ ಮಾನಾಡಿದರು.  ಕಾಲೇಜಿನ ಪ್ರಾಂಶುಪಾಲರಾದ ಸರಸ್ವತಿ ಕಳಸದ ಅಧ್ಯಕ್ಷತೆ ವಹಿಸಿದ್ದರು.

ಮೌನೇಶ ಬಡಿಗೇರ ಸ್ವಾಗತಿಸಿ, ನಿರೂಪಿಸಿದರು. ರೋಹಿಣಿ ಘಂಟಿ ವಂದಿಸಿದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ತರಬೇತಿಯಲ್ಲಿ ಜಿಲ್ಲೆಯ ಒಟ್ಟು 60 ಅಭ್ಯರ್ಥಿಗಳು ತರಬೇತಿಯ ಲಾಭವನ್ನು ಪಡೆಯುತ್ತ್ತಿದ್ದಾರೆ. ರಶ್ಮಿ ಛಡ್ಡಾ ತಾಂತ್ರಿಕ ಅಧಿವೇಶನಗಳನ್ನು ನಡೆಸಿಕೊಟ್ಟರು.