ಉದ್ಯಮದಾರರು ಪ್ರತಿಯೊಬ್ಬರು ಜಿಎಸ್‍ಟಿ ತೆಗೆಯಬೇಕು : ಲಖನ್ ಜಿ. ಜಾಜು

ವಿಜಯಪುರ :ಜೂ.5:ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಸಿಯೇಶನ್ (ರಿ) ವಿಜಯಪುರ ಹಾಗೂ ಅಪ್ಸರಾ ಸೀನಿಪ್ಲೇಕ್ಸ್ ಥೇಟರ್ , ವಿಜಯಪುರ ಇವರ ಸಹಯೋಗದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಹಿತಿ ಕಾರ್ಯಾಗಾರವು ನಗರದ ಅಪ್ಸರಾ ಮಲ್ಟಿ ಪರ್ಪಜ್ ಫಂಕ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಹಿತಿ ಕಾರ್ಯಗಾರ ಹಾಗೂ ಲೆಕ್ಕ ಪರಿಶೋಧಕರಾದ ಲಖನ್ ಜಿ. ಜಾಜು ಮಾತನಾಡಿ, ಸರಕು ಮತ್ತು ಸೇವೆಗಳ ತೆರಿಗೆ ಜಾರಿಗೊಳಿಸಿದಾಗ, ಅನ್ವಯವಾಗುವ ಸರಕುಗಳು ಮತ್ತು ಸೇವೆಗಳ ತೆರಿಗೆಗಳು 3 ವಿಧಗಳಾಗಿರುತ್ತವೆ: ಸಿ.ಜಿ.ಎಸ್.ಟಿ.ಎಸ್: ಆದಾಯವನ್ನು ಕೇಂದ್ರ ಸರಕಾರದಿಂದ ಸಂಗ್ರಹಿಸಲಾಗುವುದು ಎಸ್ ಜಿ.ಎಸ್ ಟಿ: ಇನ್ಟ್ರಾ-ಸ್ಟೇಟ್ ಮಾರಾಟಕ್ಕಾಗಿ ಆದಾಯವನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸಲಿವೆ ಐಜಿಎಸ್ ಟಿ: ಅಂತರ್-ರಾಜ್ಯ ಮಾರಾಟಕ್ಕಾಗಿ ಕೇಂದ್ರ ಸರ್ಕಾರವು ಆದಾಯವನ್ನು ಸಂಗ್ರಹಿಸುತ್ತದೆ ಜಿಎಸ್ ಟಿ ಟ್ರೇಡಿಂಗದವರಿಗೆ 40 ಲಕ್ಷ ವರೆಗೂ ಯೂನಿಟ ಮಾಡುತ್ತಿರುವರಿಗೆ ಜಿಎಸ್ ಟಿ ಮಾಡಬಹುದು. ಜಾಬ್ ವರ್ಕ್ ಗೆ 6% ಆಗಬಹುದು. ಶಾಲೆಗೆ ಸಂಬಂಧಪಟ್ಟ ಮುದ್ರಣಕ್ಕೆ 12 % ಆಗಬಹುದು. ಇದು ಇನ್ನೀತರ ಮುದ್ರಣಕ್ಕೇ 18% ಆಗುತ್ತದೆ. ನಿಮ್ಮಗೆ ಸರ್ಕಾರದ ಅನುದಾನದಡಿ ಕಾರ್ಯ ನಿರ್ವಹಿಸಬೇಕೆಂದರೆ ಕಡ್ಡಾಯವಾಗಿ ಜಿಎಸ್ ಟಿ ಇರಬೇಕು. ಮುಂದಿನ ಭವಿಷ್ಯಕ್ಕಾಗಿ ನೀವು ಬೆಳೆಯಬೇಕೆಂದರೆ ಜಿಎಸ್ ಟಿ ಇರಬೇಕು. ನಿಮ್ಮ ಜಾಬವರ್ಕ್ ಗಳಾದ, ಬಿಲ್ ಬುಕ್, ಮ್ಯಾರೇಜ್ ಕಾರ್ಡ್ , ಕ್ಯಾಲೇಂಡರ್, ವಿಜಿಇಂಗ ಕಾರ್ಡ್ ಮುಂತಾದವುಗಳಿಗೆ 18 % ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಕೀಲರಾದ ಶಂಕ್ರೆಯ್ಯಾ ಆರ್. ಮಠಪತಿ ಮಾತನಾಡಿ, ಇವತ್ತಿನ ದಿನ ತಂತ್ರಜ್ಞಾನದ ದಿನವಾಗಿದೆ. ಜಿಎಸ್ ಟಿ ಬಗ್ಗೇ ಹೆದರುವ ಪ್ರಶ್ನೆ ಇಲ್ಲ ಯಾಕೆಂದರೇ ಈಗಿನ ಜನರಿಗೆ ಮಾಹಿತಿಯ ಬಗ್ಗೆ ಕಲೆ ಹಾಕಲು ಯಾರ ಬಳಿ ಹೋಗಲು ಅನಿವಾರ್ಯತೆ ಇಲ್ಲ ಅದಕ್ಕೇ ನಿಮ್ಮ ಗೂಗಲ್ ನಲ್ಲಿ ಸಾಕಷ್ಟು ಮಾಹಿತಿ ಲಭ್ಯ ಇವೆ. ಅದನ್ನು ಸರಿಯಾಗಿ ಓದುಕೊಂಡು ಅದರ ಪ್ರಕಾರ ಸರ್ಕಾರಕ್ಕೆ ವಂಚನೆ ಮಾಡದೇ ಜಿಎಸ್ ಟಿ ತುಂಬಿದರೆ ಸಾಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರಾದ ಸಂಘದ ಅಧ್ಯಕ್ಷರಾದ ರಾಜಶೇಖರ ಮಾತನಾಡಿ, ಜಿಎಸ್ ಟಿ ರೆಗ್ಯೂಲರ ಆಗಿ ತಗೆದುಕೊಳ್ಳುವುದು ಅತಿ ಉತ್ತಮವಾಗಿದೆ. ಜಿಎಸ್ ಟಿ ಯಾಗಿ ಪ್ರತಿಯೊಬ್ಬ ಉದ್ಯೋಗ ಮಾಡುವವರು ಕಡ್ಡಾಯವಾಗಿ ತಗೆದುಕೊಳ್ಳಬೇಕು. ಕಾನೂನು ರೀತಿಯಾಗಿ ಪ್ರತಿಯೊಬ್ಬರು ಮುದ್ರಣಕಾರರು ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಚಿದಾನಂದ ವಾಲಿ ಸ್ವಾಗತದೊಂದಿಗೆ ಕಾರ್ಯಕ್ರಮ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಚಂದ್ರಶೇಖರ ಬುರಾಣಪುರ, ಕಾರ್ಯದರ್ಶಿ ವೆಂಕಟೇಶ ಕಾಳೆ, ಖಜಾಂಚಿ ಹನಿಪ ಮುಲ್ಲಾ, ನಿರ್ದೇಶಕರುಗಳಾದ ನಬಿ ಮಕಾಂದಾರ, ಉಮೇಶ ಕುಲಕರ್ಣಿ, ನಾಗರಾಜ ಬಿಸನಾಳ, ಉಮೇಶ ಶಿವಶರಣ, ಸುರೇಶ ಗೊಳಸಂಗಿ, ಜಗದೀಶ ಶಹಾಪುರ, ಮಂಜು ರೂಗಿ, ದೀಪಕ ಜಾಧವ ಹಾಗೂ ಮುದ್ರಣಕಾರರಾದ ಈರಣ್ಣ ಅಳ್ಳಗಿ, ರವಿ ಕುಲಕರ್ಣಿ, ಗೀತಾ ಪ್ರಿಂಟಿಂಗ್ ಪ್ರೆಸ್, ಸಂತೋಷ ಹುಣಶ್ಯಾಳ, ಬಸವರಾಜ ಗೊಳಸಂಗಿ, ಉಬೇದ ಜಹಾಗೀರದಾರ, ಮಹ್ಮದಉಸ್ಮಾನ ಗಣಿ ಮುಲ್ಲಾ, ಮಹಾನಿಂಗ ಗುಬ್ಬಿ, ರಾಜು ರೇಶ್ಮೀ, ಬಸವರಾಜ ಬಿಜ್ಜರಗಿ, ರಮೇಶ ಹೆಗಡಿ, ಸಿದ್ದಲಿಂಗ ಸಿಂಪಗಿ, ಸದಾ ಘೋರ್ಪಡೆ, ಅಪ್ಪು ಹಳ್ಳಿ, ಹಿರಿಯರಾದ ಆರ್. ಬಿ. ಕುಲಕರ್ಣಿ ಮುಂತಾದವರು ಇದ್ದರು ಕಾರ್ಯಕ್ರಮವನ್ನು ಶ್ರೀಮಂತ ಬೂದಿಹಾಳ ನಿರೂಪಿಸಿದರು. ನಿರ್ದೇಶಕರಾದ ಉಮೇಶ ಶಿವಶರಣ ವಂದಿಸಿದರು.